ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಸೊಳ್ಳೆಗಳ ಲೋಕದೊಳಗೆ ಒಂದು ಸುತ್ತು

This image has an empty alt attribute

ಹೆಣ್ಣು ಸೊಳ್ಳೆ ಮಾಂಸಾಹಾರಿ ಗಂಡು ಸೊಳ್ಳೆ ಸಸ್ಯಾಹಾರಿ!

‘ಸೊಳ್ಳೆಯ ಸಂಗ ಆರೋಗ್ಯ ಭಂಗ’! ನಾವು ಸೊಳ್ಳೆಯ ಸಂಗ ಮಾಡದಿದ್ದರೂ ಅವುಗಳಿಗೆ ಮಾತ್ರ ನಮ್ಮ ಸಂಗ ಬಲು ಪ್ರಿಯ. ಸೊಳ್ಳೆ ಎಂದರೆ ತಕ್ಷಣ ನೆನಪಾಗುವುದು ಅದು ಕಿವಿ ಬಳಿ ಬಂದು ಮೊಳಗಿಸುವ ಗುಂಯ್ ಗುಂಯ್ ನಾದ.

ಸೊಳ್ಳೆ ಎಂದರೆ ಎಲ್ಲರಿಗೂ ಕಿರಿಕಿರಿ, ಅಲರ್ಜಿ ಇತ್ಯಾದಿ. ಎಷ್ಟೋ ಬಾರಿ ಅದನ್ನು ಹೊಡೆಯುವ ಪ್ರಯತ್ನದಲ್ಲಿ ತಮ್ಮನ್ನು ತಾವೇ ಹೊಡೆದುಕೊಳ್ಳವವರೇ ಹೆಚ್ಚು. ರೋಗಾಣುಗಳಿಗೂ ಮನುಷ್ಯರಿಗೂ ಮದ್ಯವರ್ತಿಯಾಗಿ ಕೆಲಸಮಾಡುವ, ರಾತ್ರಿಹೊತ್ತು ನಿದ್ದೆಗೆಡಿಸುವ ಸೊಳ್ಳೆಗಳು ಇರದ ಜಾಗವೇ ಇಲ್ಲ. ಊರಲ್ಲೂ ಕಾಡಲ್ಲೂ ಅವುಗಳ ಗುಂಯ್ ಗುಂಯ್ ಗಾನ. ಮನೆಯ ಸತ್ತಮುತ್ತಲು ಶುಚಿಯಾಗಿಡದ ಪ್ರದೇಶಗಳೇ ಅವುಗಳಿಗೆ ಆರಮನೆ. ಅವುಗಳ ಪರಿವಾರ ಮನುಷ್ಯ ಸಂಸಾರದಷ್ಟು ಚಿಕ್ಕದಲ್ಲ ಅವುಗಳದು ಅವಿಭಕ್ತ ಸಹಸ್ರಾರು ಮಕ್ಕಳು ಮರಿಮಕ್ಕಳ ಕುಟುಂಬ.

ಸೊಳ್ಳೆ ಒಂದು ಹಾರುವ ಕೀಟ. ವೈಜ್ಞಾನಿಕ ವಿಂಗಡಣೆ ಪ್ರಕಾರ ಎನೀಮಲಿಯಾ ರಾಜ್ಯಕ್ಕೆ ಸೇರುವ ಇನಸೆಕ್ಟಾ ವರ್ಗದ ಕ್ಯೂಲಿಸಿಡೇ ವಂಶಕ್ಕೆ ಸೇರುತ್ತದೆ. ಜಗತ್ತಿನಲ್ಲಿ ಸರಿಸುಮಾರು 3500 ಬಗೆಯ ಸೊಳ್ಳೆ ಜಾತಿಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಏಡೆಸ್, ಅನಾಫಿಲೀಸ್, ಕ್ಯುಲೆಕ್ಸ್ ಮತ್ತು ಕ್ಯುಲಿಸೀಟಾ.

ಎಲ್ಲಾ ಜಾತಿಯ ಸೊಳ್ಳೆಗಳಿಗೂ ಅವುಗಳದ್ದೆ ಆದ ಜೀವನ ಶ್ಯಲಿಯಿದೆ. ಸೊಳ್ಳೆಗಳಿಗೆ ಅವುಗಳ ಜೀವನ ಚಕ್ರವನ್ನು ಪರಿಕ್ರಮಿಸಲು ನೀರು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಅದು ಕೊಳಚೆ ನೀರಾಗಿರಬಹುದು, ಚರಂಡಿ ಅಥವಾ ಗಡಸು ನೀರೇ ಆಗಿರಬಹುದು. ಸೊಳ್ಳೆಗಳು ಯಾವ ನೀರಿನಲ್ಲಿ ಕಂಡುಬರುತ್ತವೆಯೋ ಅದರ ಆಧಾರದ ಮೇಲೆ ಅವುಗಳ ಜಾತಿಗಳನ್ನು ಹೆಸರಿಸಬಹುದು. ಅವುಗಳ ಜೀವನ ಚಕ್ರ ಆರಂಭವಾಗುವುದು ಮರದ ಪೊಟರೆಗಳ ಮಧ್ಯದಲ್ಲಿ ನಿಂತ ನೀರು, ಕೊಳಚೆ ನೀರು, ಮಳೆ ನೀರು ಇತ್ಯಾದಿಗಳಿಂದ.

ಸೊಳ್ಳೆಗಳ ಆಹಾರ ಕ್ರಮ ಅತ್ಯಂತ ವಿಚಿತ್ರ. ಗಂಡು ಸೊಳ್ಳೆಗಳು ಸಸ್ಯಹಾರಿಗಳಾದರೆ, ಹೆಣ್ಣು ಸೊಳ್ಳೆಗಳು ಮಾಂಸಹಾರಿಗಳು! ಗಂಡು ಸೊಳ್ಳೆಗಳು ಸಸ್ಯಗಳ-ಎಲೆಗಳ ರಸ ಹೀರಿದರೆ, ಹೆಣ್ಣು ಸೊಳ್ಳೆ ಮಾಹಾಮಾರಿಯಂತೆ ಮನುಷ್ಯನ ರಕ್ತ, ಸಾಕುಪ್ರಣಿಗಳಾದ ಹಸು, ಕುದುರೆ, ಆಡು ಇತ್ಯಾದಿ ಅಲ್ಲದೇ, ಪಕ್ಷಿಗಳು ಕಾಡು ಪ್ರಾಣಿಗಳಾದ ಜಿಂಕೆ, ಮೊಲ ಮತ್ತು ಹಾವು, ಕಪ್ಪೆ, ಹಲ್ಲಿ ಇವುಗಳ ರಕ್ತವನ್ನು ಹೀರುತ್ತವೆ.

ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿ ಸಮಯದಲ್ಲಿ ಅಗತ್ಯವಾದ ಪರಿಸರವನ್ನು ಸ್ವತಃ ಆಯ್ದುಕೊಳ್ಳುವುದಲ್ಲದೇ, ಸರಿಯಾದ ಆಹಾರ ಅಂದರೆ ಪ್ರಾಣಿಗಳು ಅಥವಾ ಮನುಷ್ಯನ ರಕ್ತವನ್ನು ಹೀರುತ್ತವೆ. ಅವು ಸರಿಯಾದ ಪ್ರಮಾಣದಲ್ಲಿ ರಕ್ತವನ್ನು ಹೀರದೇ ಇದ್ದರೆ ಸಂತಾನೋತ್ಪತ್ತಿ ಸಮಯದಲ್ಲಿ ಸಾಯುತ್ತವೆ. ಆದರೆ ಕೆಲವೊಂದು ಜಾತಿಯ ಸೊಳ್ಳೆಗಳು ಸೂಕ್ತ ಆಹಾರವಿಲ್ಲದೆಯೂ, ಮೊಟ್ಟೆಗಳನ್ನಿಡಬಲ್ಲವು.

ಸೊಳ್ಳೆಗಳು ನಾಲ್ಕು ಹಂತದ ಜೀವನ ಚಕ್ರವನ್ನು ಹೊಂದಿರುತ್ತವೆ. ಅವುಗಳೆಂದರೆ- ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಅಡಲ್ಟ್. ಸಂತಾನೋತ್ಪತ್ತಿ ಸಮಯದಲ್ಲಿ ಸೊಳ್ಳೆಗಳು ನೀರಿನ ಮೇಲ್ಮೆöÊ ಮೇಲೆ ಮೊಟ್ಟೆಗಳನ್ನಿಡುತ್ತವೆ. ಅನಾಫಿಲೀಸ್ ಮತ್ತು ಏಡೆಸ್ ಸೊಳ್ಳೆಗಳ ಮೊಟ್ಟೆಗಳು ಒಂದಕ್ಕೊAದು ಅಂಟಿಕೊAಡಿರುತ್ತವೆ. ಆದರೆ ಏಡೆಸ್ ಸೊಳ್ಳೆಗಳು ಒದ್ದೆ ಮಣ್ಣಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಕ್ಯುಲೆಕ್ಸ್ ಮತ್ತು ಕ್ಯುಲಿಸೇಟಾ ಸೊಳ್ಳೆಗಳ ಮೊಟ್ಟೆಗಳು ಒಂದಕ್ಕೊAದು ಅಂಟಿಕೊAಡಿರುವುದಿಲ್ಲ.

ಸೊಳ್ಳೆಗಳ ಮೊಟ್ಟೆಗಳು ಲಾರ್ವಾ ಸ್ಥಿತಿಯನ್ನು ತಲುಪಲು ಸುಮಾರು 48 ಗಂಟೆಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತವೆ. ಲಾರ್ವೆಯ ಸ್ಥಿತಿಯಲ್ಲಿ ಸೊಳ್ಳೆಗಳು ಹೊರಪದರಕ್ಕೆ ಬರುತ್ತವೆ. ಲಾರ್ವೆಯು ನಾಲ್ಕು ಹಂತಗಳ ನಂತರ ಪ್ಯುಪಾ ಸ್ಥಿತಿಯನ್ನು ತಲುಪುತ್ತದೆ. ಪ್ಯುಪಾ ಸ್ಥಿತಿಯಲ್ಲಿ ಸೊಳ್ಳೆಗಳು ಯಾವುದೇ ಆಹಾರ ಸೇವಿಸುವುದಿಲ್ಲ. ಇದು ಸೊಳ್ಳೆಗಳಿಗೆ ವಿಶ್ರಾಂತಿಯ ಹಂತ. ಈ ಸ್ಥಿತಿ ಸಾಮಾನ್ಯವಾಗಿ ಎರಡು ದಿನಗಳು.. ನಂತರ ಅಡಲ್ಟ್ ಹಂತಕ್ಕೆ ಬಂದ ಸೊಳ್ಳೆ ಮೊದಲು ನೀರಿನ ಮೇಲ್ಮೆöÊ ಮೇಲೆ ಸ್ವಲ್ಪ ಹೊತ್ತು ಕಳೆಯುತ್ತದೆ. ಅಲ್ಲಿ ಅದರ ಮೇಲ್ಮೆöÊನ ದ್ರವ ಪದಾರ್ಥಗಳು ಒಣಗಿ ನಂತರ ರೆಕ್ಕೆ ಬಲಿತು ದಿನಚರಿ ಆರಂಭಿಸುತ್ತದೆ.

ವಾತಾವರಣದ ಉಷ್ಣತೆ ಸೊಳ್ಳೆಗಳ ಪ್ರಭೇದದ ಲಕ್ಷಣಗಳು ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆೆ.

ಸೊಳ್ಳೆಗಳ ವೈವಿಧ್ಯತೆಯ ಪ್ರಮುಖ ಅಂಶಗಳೆAದರೆ-

* ಬಲಿತ ಸೊಳ್ಳೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತವೆ.

* ಸೊಳ್ಳೆಗಳ ಸ್ಥಳಾಂತರದಲ್ಲಿ ಗಾಳಿಯ ಪಾತ್ರ ಪ್ರಮುಖವಾಗಿರುತ್ತದೆ.

* ಹಾರುವ ಸಾವiರ್ಥ್ಯ ಸೊಳ್ಳೆಗಳಿಂದ ಸೊಳ್ಳೆಗಳಿಗೆ ವಿಭಿನ್ನವಾಗಿರುತ್ತವೆ.

* ಗಂಡು ಸೊಳ್ಳೆಗಳಿಗಿಂತ ಹೆಣ್ಣು ಸೊಳ್ಳೆಗಳಿಗೆ ಹಾರುವ ಸಾಮರ್ಥ್ಯ ಅಧಿಕವಾಗಿರುತ್ತದೆ. * ಸೊಳ್ಳೆಗಳ ಜೀವನಾವಧಿ ಆ ಪರಿಸರದ ಉಷ್ಣಾಂಶ, ತೇವಾಂಶ ಮತ್ತು ಅದರ ಲೈಂಗಿಕ ಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ.

* ಗಂಡು ಸೊಳ್ಳೆಗಳು ಅತಿ ಕಡಿಮೆ ಅಂದರೆ ಒಂದು ವಾರ ಜೀವಿತಾವಧಿಯನ್ನು ಹೊಂದಿರುತ್ತವೆ. ಆದರೆ ಹೆಣ್ಣು ಸೊಳ್ಳೆಗಳು ಒಂದು ತಿಂಗಳು ಜೀವಿತಾವಧಿಯನ್ನು ಹೊಂದಿರುತ್ತವೆ.

ಸೊಳ್ಳೆಗಳು ಮನುಷ್ಯನಿಂದ ಅಥವಾ ಯಾವುದೇ ಪ್ರಾಣಿಗಳಿಂದ ಒಮ್ಮೆ ಸರಿಸುಮಾರು 5 ಮೈಕ್ರೋಲೀಟರ್‌ನಷ್ಟು ರಕ್ತವನ್ನು ಹೀರುತ್ತವೆ. ಇವುಗಳಿಂದ ಬರುವ ಪ್ರಮುಖ ಕಾಯಿಲೆಗಳೆಂದರೆ ಮಲೇರಿಯಾ, ಹಳದಿ ಜ್ವರ, ಎನ್‌ಸೆಫಾಲಿಟಿಸ್ ಮತ್ತು ಡೆಂಗ್ಯು ಜ್ವರ. ಮಲೇರಿಯಾ ರೋಗ ಮೂಲತಃ ಪ್ರೋಟೊಝೋವಾ ಎನ್ನುವ ಪರಾವಲಂಬಿ ಜೀವಿಯಿಂದ ಬಂದರೂ ಅದನ್ನು ವರ್ಗಾಯಿಸುವ ಕೆಲಸ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯದು. ಹಳದಿ ಜ್ವರವು ಏಡೆಸ್ ಏಜಿಪ್ಟಿ ಸೊಳ್ಳೆಯಿಂದ ಹರಡುತ್ತದೆ. ಸಾಮಾನ್ಯವಾಗಿ ಇದರ ಲಕ್ಷಣಗಳು ಮಲೇರಿಯಾವನ್ನೆ ಹೋಲುತ್ತವೆ. ಇದು ಅರಿಶಿನ ಕಾಮಾಲೆಗೂ ದಾರಿ ಮಾಡುತ್ತದೆ. ಎನ್‌ಸೆಫಾಲಿಟಿಸ್ ರೋಗವು ವೈರಸ್‌ನಿಂದ ಬರುವ ಕಾಯಿಲೆಯಾದರೂ ಇದಕ್ಕೆ ಮಧ್ಯವರ್ತಿ ಮಾತ್ರ ಕ್ಯುಲಿಸೇಟಾ ಎಂಬ ಸೊಳ್ಳೆ. ಡೆಂಗು ಜ್ವರವು ಎಸಿಯೇನ್ ಸೊಳ್ಳೆಗಳÀ ಮೂಲಕ ಹರಡುತ್ತದೆ. ಇದು ಚಿಕ್ಕ ಮಕ್ಕಳಿಗೆ ಬಂದರೆ ತುಂಬಾ ಅಪಾಯಕಾರಿ.

ಸೊಳ್ಳೆಕಾಟ ತಡೆಯಲು ಹಲವಾರು ವಿಧಾನಗಳಿವೆ. ಅದು ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಸೊಳ್ಳೆಗಳÀ ಮೂಲ ನಾಶಪಡಿಸುವಿಕೆ, ಜೈವಿಕ ನಿಯಂತ್ರಣ, ಸೊಳ್ಳೆಗಳನ್ನು ಲಾರ್ವಾ ಸ್ಥಿತಿಯಲ್ಲೇ ನಿಯಂತ್ರಣ ಮಾಡುವಿಕೆ ಇತ್ಯಾದಿಗಳಿಗೆ ಸೂಕ್ತ ಉಪಕ್ರಮ ಕೈಗೊಳ್ಳಬೇಕು.

ಸೊಳ್ಳೆಗಳ ನಿರ್ಮೂಲನೆಯಲ್ಲಿ ನಾವು ನೈಸರ್ಗಿಕವಾದ ಕ್ರಮವನ್ನು ಅನುಸರಿಸುವುದು ಉತ್ತಮ. ನೈಸರ್ಗಿಕವಾಗಿ ಬೃಹತ್ ನೊಣಗಳು(ಡ್ರಾö್ಯಗನ್ ಫ್ಲೆöÊ) ಸೊಳ್ಳೆಗಳನ್ನು ನಾಶಪಡಿಸುತ್ತವೆ. ಇದಲ್ಲದೇ ಬಾವಲಿಗಳು ಮತ್ತು ಪರ್ಪಲ್ ಮಾರ್ಟಿನ್‌ಗಳು ಸೊಳ್ಳೆಗಳ ಸಂತತಿಯನ್ನು ಕಡಿಮೆ ಮಾಡುತ್ತವೆ. ಸೈಕ್ಲೋಪೈಡ್ ಕಾಪೇಪಾಡ್ಸ್ ಎನ್ನುವ ಕೀಟ ಸುಮಾರು 40 ರಷ್ಟು ಏಡೆಸ್ ಸೊಳ್ಳೆಗಳನ್ನು ಲಾರ್ವಾ ಸ್ಥಿತಿಯಲ್ಲಿ ನಾಶಪಡಿಸುತ್ತವೆ.

ಲಾರ್ವಲ್ ಟಾಕ್ಸರ್‌ಹೈನಚಿಟೀಜ್ ಸೊಳ್ಳೆಗಳು ಒಂದು ದಿನಕ್ಕೆ 10 ರಿಂದ 20 ಲಾರ್ವಾಗಳನ್ನು ತಿನ್ನುತ್ತವೆ. ಸಣ್ಣ ಮೀನುಗಳು ಸಹ ಲಾರ್ವಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಾಶಪಡಿಸುತ್ತವೆ. ಬ್ಲಾಸ್ಸ್, ಬ್ಲೂö್ಯಗಿಲ್ಲ್, ಕ್ಯಾಟೀಶ್, ಫ್ಯಾತ್‌ಹೆಡ್ಡ್, ಮಿನ್ನೋಸ್, ವೆಸ್ಟರ್ನ್ ಮೊಸಕಿಟೋ ಫಿಶ್, ಗೊಲ್ಡ್ ಫಿಶ್, ಗಪ್ಪೀಸ್ & ಕಿಲ್ಲಿಫಿಶ್ ಇವುಗಳು ಸಹ ಸೊಳ್ಳೆಗಳನ್ನು ನಾಶಪಡಿಸುತ್ತವೆ.

ಇವೆಲ್ಲ ಏನೇ ಇದ್ದರೂ ಸೊಳ್ಳೆಗಳ ನಿವಾರಣೆಗೆ ನಾವು ಏನೇನು ಮಾಡಬಹುದು ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ.

* ಮನೆಯ ಸುತ್ತಮುತ್ತ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು.

* ವಾರಕೊಮ್ಮೆಯಾದರೂ ಮನೆಯ ಸನಿಹ ಕೊಳಗಳಿದ್ದಲ್ಲಿ ಶುಚಿಗೊಳಿಸಬೇಕು.

* ಕ್ಯಾನ್ ಮತ್ತು ದೊಡ್ಡ ದೊಡ್ಡ ಬ್ಯಾರೆಲ್‌ಗಳಲ್ಲಿ ಅನಾವಶ್ಯಕವಾಗಿ ನೀರು ಸಂಗ್ರಹ ಮಾಡಬಾರದು.

* ಮಕ್ಕಳು ಆಟ ಆಡುವ ಜಾಗಗಳನ್ನು ಶಚಿಯಾಗಿಡಬೇಕು.

* ಮನೆಯ ಸುತ್ತಮುತ್ತ ಸಣ್ಣ-ಸಣ್ಣ ನೀರಿನ ಗುಂಡಿಗಳಿದ್ದರೆ ಅವುಗಳನ್ನು ಮುಚ್ಚಬೇಕು.

* ವಾರಕೊಮ್ಮೆಯಾದರೂ ಚರಂಡಿಗಳನ್ನು ಶುಚಿಗೊಳಿಸಬೇಕು.

* ಕೊಳಗಳಲ್ಲಿ ಹೆಚ್ಚಾಗಿ ಮೀನುಗಳನ್ನು ಸಾಕಿದರೆ ಒಳ್ಳೆಯದು.

* ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಪೊದೆಗಳಲ್ಲಿ, ಸಣ್ಣ ಸಣ್ಣ ಗಿಡಗಂಟೆಗಳಲ್ಲಿ ವಿಶ್ರಮಿಸುವುದರಿಂದ ಆಗಾಗ್ಗೆ ಪೊದೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಬೇಕು.

* ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆವಹಿಸಬೇಕು.

ಇನ್ನು, ರಾತ್ರಿಯ ವೇಳೆ ಮಲಗಬೇಕಾದರೆ ಸೊಳ್ಳೆಯ ಪರದೆಗಳನ್ನು ಬಳಸುವುದು ಉತ್ತಮ. ಬೇವಿನ ಎಣ್ಣೆ ಅತ್ಯುತ್ತಮ ಸೊಳ್ಳೆ ನಿವಾರಕ. ಸಾಂಬ್ರಾಣಿ ಹೊಗೆ ಸಹ ಸೊಳ್ಳೆಗಳನ್ನು ಓಡಿಸಬಲ್ಲದು.

ಸೊಳ್ಳೆಬತ್ತಿ, ದ್ರವ, ಕ್ರೀಂ ಲೇಪನ ಇತ್ಯಾದಿ ಸೊಳ್ಳೆಗಳನ್ನು ದೂರವಿಡಲು ಆಧುನಿಕ ವಿಧಾನಗಳಿವೆ. ರಾಸಾಯನಿಕಗಳನ್ನೊಳಗೊಂಡ ಇವೆಲ್ಲ ಆರೋಗ್ಯಕ್ಕೆ ಹಾನಿಕರವಾದರೂ, ಸೊಳ್ಳೆಗಳಿಂದ ಅಪಾಯ ಹೆಚ್ಚಿರುವುದರಿಂದ, ಇವುಗಳನ್ನು ಬಳಸುವುದು ಅನಿವಾರ್ಯವಾಗಿದೆ.

Share8Tweet5SendShareShare
Next Post
ಕನ್ನಡ ಪುಸ್ತಕೋದ್ಯಮದ ಕಹಿಸತ್ಯ

ಕನ್ನಡ ಪುಸ್ತಕೋದ್ಯಮದ ಕಹಿಸತ್ಯ

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.