ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಸುನೀತಾಗೆ ನೋಬೆಲ್‌ ಕೊಡಬಹುದಾ?  

ಅಡಚಣೆ ಇದೆ; ಮೀರಬೇಕಿದೆ!

ಸುನೀತಾಗೆ ನೋಬೆಲ್‌ ಕೊಡಬಹುದಾ?  

ಹೌದು. ಸುನೀತಾ ವಿಲಿಯಮ್ಸ್‌ ಹಾಗೂ ಸಹಯಾತ್ರಿ ಬುಚ್‌ ವಿಲ್ಮೋರ್‌ಗೆ ಈ ಸಾಲಿನ ನೋಬೆಲ್‌ ಪ್ರಶಸ್ತಿ ಕೊಡಬೇಕು ಎನ್ನುವುದು ಎಲ್ಲರ ಆಶಯ. ಮೂಲ ವಿಜ್ಞಾನದ ಸಾಧಕರಿಗಷ್ಟೇ ಇರುವ ನೋಬೆಲ್‌ ಪ್ರಶಸ್ತಿ, ಅನ್ವಯಿಕ ವಿಜ್ಞಾನ ವಿಭಾಗದಲ್ಲಿ ಕೊಡುವುದಕ್ಕೆ ನಿಯಮಗಳು ಅಡ್ಡ ಬರಬಹುದು. ಆದರೆ, ಭೌತಶಾಸ್ತ್ರ ವಿಭಾಗದಲ್ಲಿಯಾದರೂ ಈ ಪ್ರಶಸ್ತಿ ಸುನೀತಾ ಹಾಗೂ ಬುಚ್‌ ಅವರಿಗೆ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸವನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ.

ಹಾಗೆ ಮಾಡಿದಲ್ಲಿ ಭಾರತೀಯ ಮೂಲದ ಮೊದಲ ಮಹಿಳಾ ವಿಜ್ಞಾನಿಗೆ ನೋಬೆಲ್‌ ಪ್ರಶಸ್ತಿ ದೊರೆತಂತಾಗುತ್ತದೆ.

ಒಂಭತ್ತು ದಿನಗಳ ಮಟ್ಟಿಗೆ ಹೋದ ಸುನೀತಾ ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಉಳಿಯುವಂತಾದ್ದದ್ದು ಒಂದು ದೊಡ್ಡ ಕತೆ. ಸುನೀತಾ-ಬುಚ್‌ ಸಜೀವ ಮರಳದಿದ್ದರೆ ಅಮೆರಿಕದಂಥ ದೈತ್ಯರಾಷ್ಟ್ರಕ್ಕೆ ಕಪ್ಪುಚುಕ್ಕೆಯಾಗುತ್ತಿತ್ತು. ಆರಂಭದಲ್ಲಿ ರಷ್ಯಾ ಸಹಾಯ ಮಾಡಲು ಮುಂದೆ ಬಂದಿತ್ತು. ಆದರೆ ಅದರ ಸಹಾಯ ಪಡೆದು ಸಣ್ಣವನಾಗಲು ದೊಡ್ಡಣ್ಣ ಸಿದ್ಧನಿರಲಿಲ್ಲ! ಸುನೀತಾ ಪ್ರಾಣವನ್ನೇ ಒತ್ತೆ ಇಟ್ಟು ಸ್ವಾಭಿಮಾನದ ಹಠ ಸಾಧಿಸಿದರು. ಉದ್ಯಮಿ ಎಲಾನ್‌ ಮಸ್ಕ್‌ ತಮ್ಮ ಸ್ಪೇಸ್‌ ನೌಕೆ ಕಳಿಸಿ ಅಮೆರಿಕದ ಮಾನ ಕಾಪಾಡಿದರು ಎಂದರೆ ಅತಿಶಯೋಕ್ತಿಯಲ್ಲ.

ಗುಜರಾತ್‌ ಮೂಲದ ನರರೋಗತಜ್ಞ ಡಾ.ದೀಪಕ್‌ ಪಾಂಡ್ಯ ಹಾಗೂ ಸ್ಲೋವಿಯಾ ಮೂಲದ ಬೋನಿ ಪಾಂಡ್ಯರ ಮಗಳು ಸುನೀತಾ. ಪೋಷಕರು ಯುಕ್ಲಿಡ್‌ಗೆ ಹೋಗಿ ನೆಲೆಸಿದರು. ಅಲ್ಲಿ ಸುನೀತಾ ಹುಟ್ಟಿದ್ದು. ನಂತರ ಮೆಸ್ಸಾಚುಸೆಟ್ಸ್‌ ರಾಜ್ಯಕ್ಕೆ ಬಂದು ನೆಲೆಸಿದರು. ಬಹಳ ಪ್ರತಿಭಾವಂತೆ ಸುನೀತಾ ಮೆಸಾಚುಸೆಟ್ಸ್‌ನ ನೀಡಮ್‌ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ನಂತರ ೧೯೮೩ ರಲ್ಲಿ ಪದವಿ ಪೂರೈಸಿದರು. ೧೯೮೭ ರಲ್ಲಿ ಅಮೆರಿಕ ನೌಕಾ ಅಕಾಡೆಮಿಯಿಂದ ಬಿ.ಎಸ್‌ಸಿ. ಪದವಿ ಪಡೆದರು. ೧೯೯೫ ರಲ್ಲಿ ಫ್ಲೋರಿಡಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯಿಂದ ಇಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೮೭ ರಲ್ಲಿ ಅಮೆರಿಕ ನೌಕಾಪಡೆ ಸೇರಲು ಪರೀಕ್ಷೆ ತೇರ್ಗಡೆಯಾದರು. ೧೯೮೯ ರಲ್ಲಿ ನೌಕೆಯ ಚಾಲಕರಾಗಿ ನಿಯುಕ್ತರಾದರು. ನೇವಲ್‌ ಟೆಸ್ಟ್‌ ಪೈಲಟ್‌ ಸ್ಕೂಲ್‌ನಿಂದಲೂ ಪದವಿ ಪಡೆದರು. ೧೯೯೮ ರಲ್ಲಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾಕ್ಕೆ ಆಯ್ಕೆಯಾದರು. ಗಗನಯಾತ್ರೆಯ ತರಬೇತಿ ಶುರುವಾಯಿತು. ಕಠಿಣ ತರಬೇತಿ ಪಡೆದರು. ನೀರಿನಲ್ಲಿ, ಕಾಡಿನಲ್ಲಿ, ಬೆಂಕಿಯಲ್ಲಿ ಬಿದ್ದರೂ ರಕ್ಷಿಸಿಕೊಳ್ಳುವ ತರಬೇತಿ ಸಿಕ್ಕು ಪರಿಪೂರ್ಣ ಮಹಿಳೆಯಾದರು. ನಂತರ ಮೂರು ಸಲ ಗಗನ ಯಾತ್ರೆ ಮಾಡಿ ದಾಖಲೆ ಮಾಡಿದರು. ಅಷ್ಟೇ ಅಲ್ಲ ೨೦೦೨ ರಲ್ಲಿ ಒಂದು ಪ್ರಾಜೆಕ್ಟ್‌ ಸಲುವಾಗಿ ನೀರಿನಾಳದಲ್ಲಿ ಸಹ ೯ ದಿನಗಳ ಕಾಲ ಅಕ್ವೇರಿಯಸ್‌ ಹ್ಯಾಬಿಟೇಟ್‌ನಲ್ಲಿ ವಾಸವಿದ್ದರು.

ಮೈಕೇಲ್‌ ವಿಲಿಯಮ್ಸ್‌ ಸುನೀತಾರ ಪತಿ. ಇವರ ದಾಂಪತ್ಯಕ್ಕೆ ೧೬ ವರ್ಷ. ವಿಲಿಯಮ್ಸ್‌ ಕೂಡ ಹೆಲಿಕಾಪ್ಟರ್‌ ಪೈಲೆಟ್.‌ ಸುನೀತಾ ಹೆಲಿಕಾಪ್ಟರ್‌ ಕೂಡ ಹಾರಿಸಬಲ್ಲರು. ಇಬ್ಬರೂ ಜಂಟಿಯಾಗಿ ಕೆಲಸ ಮಾಡಿದ್ದಾರೆ. ಸುನೀತಾ ಸ್ವಂತ ರೆಡಿಯೋ ಕೇಂದ್ರ ಹೊಂದಿದ್ದಾರೆ. ಓಟ, ಈಜು, ಬೈಕಿಂಗ್‌, ವಿಂಡ್‌ಸರ್ಫಿಂಗ್‌, ಸ್ನೋ ಬೋರ್ಡಿಂಗ್‌, ಬಿಲ್ಲುವಿದ್ಯೆ ಇವರ ಇತರ ಹವ್ಯಾಸಗಳು.

ಸುನೀತಾ ಭಾರತಕ್ಕೆ ಬಂದಿದ್ದು:

ಸುನೀತಾ ತಾಯಿ ಸ್ಲೋವಿಯಾ ಮೂಲವಾದರೂ ತಂದೆಯ ಕಡೆಯಿಂದ ಭಾರತದ ನಂಟಿದೆ. ಭಾರತಕ್ಕೆ ಅನೇಕ ಸಲ ಬಂದುಹೋಗಿದ್ದಾರೆ. ೨೦೦೭ ಸೆಪ್ಟೆಂಬರ್‌ನಲ್ಲಿ ಅವರು ಮಹಾತ್ಮ ಗಾಂಧೀಜಿಯವರ ಸಬರ್‌ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ತಮ್ಮ ಪೂರ್ವಜರ ಹಳ್ಳಿಯಾದ ಗುಜರಾತಿನ ಜುಲಾಸನ್‌ಗೂ ಭೇಟಿ ಕೊಟ್ಟಿದ್ದರು. ವಿಶ್ವ ಗುಜರಾತಿ ಸಂಸ್ಥೆ ಕೊಡಮಾಡುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವಿಶ್ವ ಪ್ರತಿಭಾ ಪುರಸ್ಕಾರ ಪಡೆದರು. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಪೌರತ್ವ ಹೊಂದಿರದ ವ್ಯಕ್ತಿ ಸುನೀತಾ. ೨೦೦೭ ರಲ್ಲಿ ಅಮೆರಿಕನ್‌ ರಾಯಭಾರಿ ಶಾಲೆ ಮತ್ತು ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ರನ್ನೂ ಭೇಟಿಯಾಗಿದ್ದರು.

Share7Tweet5SendShareShare
Next Post
Pic: Naveen M

ಸ್ಯಾಂಕಿ ವರದಿ ಮರೆತ ರಾಜ್ಯದಲ್ಲಿ ಕೆರೆ ಆರತಿ

Comments 1

  1. Vanishree Anekere says:
    1 year ago

    Sooper👍

    Reply

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.