ಬೋಳು ಗುಡ್ಡಗಳೇ ಎಲ್ಲಾ ಕಡೆ
ನಿಟ್ಟುಸಿರು ಬಿಟ್ಟು ಮತ್ತೆ
ಕಣ್ಣು ಕೀಲಿಸಿ ದೃಷ್ಟಿ ಹರಿಬಿಟ್ಟರೂ
ಹೆಸರಿಗೊಂದು ಹಸಿರ ಎಲೆಯೂ
ಕಾಣಲಿಲ್ಲ … ಗರಗಸ ಮಿಡುಕಿತು
ಆಗ ಅದೆಂತಹ ಹಸಿರ ವೈಭೋಗ
ಎಲ್ಲದರ ಮೇಲೆ ತನ್ನದೇ ಹಕ್ಕು
ಎಲ್ಲವನ್ನೂ ತಾನೇ ಕತ್ತರಿಸುವೆ ಎ0ಬ ಸೊಕ್ಕು
ನೂರ್ಕಾಲದ ಮರ, ಮೂರು ದಿನದ ಸಸಿ
ಯಾರೂ ಲೆಕ್ಕಕ್ಕಿಲ್ಲ… ಗರಗಸ ನಸುನಕ್ಕಿತು
ತನ್ನದೇ ಪಾರಮ್ಯವೆ0ದು
ನಿಧಾನವಾಗಿ ಓಲ್ಡ್ ಫ್ಯಾಷನ್ಡ್
ಮೂಡ್ನಲ್ಲಿ ಗರಗರ ಕೊರೆಯುತ್ತ
ಹಸಿರ ಹತ್ಯಾಕಾ0ಡ ಮಾಡುತ್ತಿರಲು
ಈ ತನ್ನ ಯಜಮಾನ ಮಾಡಿದ್ದೇನು?
.ತನ್ನನ್ನೇ ಮೀರಿಸುವ
ಯ0ತ್ರಗಳ ತ0ದು
ತನ್ನನ್ನುಮೂಲೆಗೆಸೆದ..
ಗರಗಸಕ್ಕೆ ಗರ ಬಡಿದಿತ್ತು
ಹೊಸ ಯ0ತ್ರಗಳು
ನೋಡನೋಡುತ್ತಿದ್ದ0ತಯೇ ತನ್ನ
ಕಣ್ಮು0ದೆಯೇ ಆ ಅಭೇಧ್ಯ ಅಡವಿಯನ್ನು
ಬಟಾಬಯಲು ಮಾಡಿದವು ಆಗಲೇ ತಿಳಿದಿದ್ದು
ತಾನೆಷ್ಟು ನಿಧಾನ, ಔಟ್ ಡೇಟೆಡ್ ಎ0ದು
ಆದರೂ ಒ0ದು ಸಣ್ಣ ಸಮಾಧಾನ ಇ0ದು
ಅವಕ್ಕೂ ತನ್ನ0ತೆ ನಿರುದ್ಯೋಗ ಪರ್ವ
ರಿಸೆಷನ್, ಪ್ರೊಫೆಷನಲ್ ಜಲಸಿ….
ಗರಗಸಕ್ಕೆ ನಿರಾಳ
ಬೆಳಗಾದರೆ ಗದೆಯ0ತೆ ಹೆಗಲೇರುತ್ತಿದ್ದ
ತಾನು ಈಗ ಮುರುಕು ಗೋಡೌನ್
ಮೂಲೆಯಲ್ಲಿ ನಿರಪಯುಕ್ತ
ಹರೆಯದ ಉಕ್ಕಿನಿ0ದ ಮಿ0ಚುತ್ತಿದ್ದ
ತಾನು ತುಕ್ಕು ಸುಕ್ಕು ತು0ಬಿದ ಹಳೆ ಕಬ್ಬಿಣ
ಆದರೂ
ಒ0ದು ಸಣ್ಣ ಆಸೆ ಮತ್ತೆ
ಹಸಿರ ಕುಯ್ಲು ಮಾಡುತ್ತೇನೆ0ದು
ಗರಗಸದ ಕ0ಗಳು ಮಿ0ಚಿತು
ಇತ್ತೀಚಿಗೆ ತನ್ನ ಯಜಮಾನನ
ಲಾನಿನಲ್ಲಿ ಬೀಜಕಣವೊ0ದು ಹುಲ್ಲಿನ
ಮಧ್ಯೆ ಮೊಳೆತು ಸಸಿಯಾಗಿದೆ
ಸಸಿ ಗಿಡವಾಗಿ ಮರ ಹೆಮ್ಮರವಾದಾಗ
ಮತ್ತೆ ತನಗೆ ಕೆಲಸ
ಸಿಗಬಹುದೆ0ದು ಕನಸ ಕಾಣುತ್ತಾ
ಗರಗಸ ಪುಳಕಗೊ0ಡಿತು ರೋಮಾ0ಚನಗೊ0ಡಿತು
ಓನರ ಹುಡುಗನಿಗೆ ಗೋಡೌನ್ ಪಕ್ಕದಲ್ಲೇ
ಉಚ್ಚೆ ಹುಯ್ಯೋ ಚಾಳಿ,
ಕಾಲ್ಗು0ಟ ಶುರುವಾಗೋ ಧಾರೆ
ಅದೇ ನನ್ನ ಗುರಿ ಎ0ಬ0ತೆ
ಹೊಸ ಗಿಡದ ಮೇಲೆ
ತು0ತುರು ನೀರಾವರಿಯಾಗಿ ಬಿದ್ದರೆ
ಮಿಕ್ಕಿದ್ದೆಲ್ಲಾ ತನ್ನ ಮೇಲೆ ಪ್ರೋಕ್ಷಣೆ …
ತುಕ್ಕು ಜಾಸ್ತಿಯಾದೀತೆ0ದು ಸಿಟ್ಟು ಬ0ದರೂ
ಒ0ದು ಕಡೆ ಸ0ತಸ… ಸಸಿ ಹುಲುಸಾಗಿ
ಬೆಳೆಯುತ್ತಿದೆ… ಗರಗಸಕ್ಕೆ ಉದ್ವೇಗ
ಹೀಗೆ ತಾನ0ದುಕೊ0ಡ0ತೆ ಎಲ್ಲಾ
ನಡೆಯುತ್ತದೆ, ತನ್ನ ರಿಸೆಷನ್ನಿಗೊ0ದು ಅ0ತ್ಯ
ಬಲುಬೇಗ ಸಿಗುತ್ತೆ ಅ0ತ
ಉಚ್ಚೆಯ ಪ್ರೋಕ್ಷಣೆಯ ತ0ಪಿನಲ್ಲಿ
ತಿರುಕನ ಕನಸು ಕಾಣಲು ಮೈಯೊಡ್ಡಿದ್ದಷ್ಟೆ
ಏನೋ ಕರ್ಕಶ ಸದ್ದು ..
ಕಣ್ಬಿಟ್ಟು ನೋಡುತ್ತಿದ್ದ0ತೆ
ಲಾನ್ ಕಟ್ಟರ್ ಹುಲ್ಲಿನೊ0ದಿಗೆ
ತನ್ನ ಆಶಾಕಿರಣದ0ತಿದ್ದ
ಸಸಿಯ ಕತ್ತನ್ನೇ ಎಗರಿಸಿತ್ತು
ಗರಗಸ ಕ0ಬನಿ ಮಿಡಿಯಿತು
ತನಗಾಗೋ ಸಸಿಗಾಗೋ
ಅದಕ್ಕಿನ್ನೂ ತಿಳಿದಿಲ್ಲ
(ಕವಿ ಇಮ್ಮಡಿ ಸಂತೋಷ್, ಸಂವೇದನಾಶೀಲ ಬರಹಗಾರ. ಉಗಾದಿಗೌಡನ ಪ್ರಣಯ ಪ್ರಸಂಗ ಅವರ ಪ್ರಕಟಿತ ಕಾದಂಬರಿ. ಪ್ರಸ್ತುತ ದೃಶ್ಯ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕೆಲಸ. )







