ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಹಾಯಿದೋಣಿ

ಹೂ ಮತ್ತು ಹುಡುಗಿ

ಕವಿತೆ - ವನಜಾ ಕೊಳಗಿ

ಹೂ ಮತ್ತು ಹುಡುಗಿ

ನಿಂತಿದ್ದಾಳೆ ಹೊತ್ತೇರುವ ಮೊದಲೇ
ಹೂ ಮಾರುವ ಹುಡುಗಿ
ಇಬ್ಬನಿಯ ಮುಸುಕಿನಲ್ಲಿ
ಹಗಲುಗನಸುಗಳ ದಂಡೆ ಹಿಡಿದ ಕೈ
ಇದ್ದಂತೆಯೇ ಇರುತ್ತದೆ
– ಪೋಸ್ಟ್‌ ಕಂಬದಂತೆ

ಏರುತ್ತಿರುವ ಸೂರ್ಯ
ಬಾಡುತ್ತಿರುವ ಹೂಗಳು
ಅದರಂತೆ ಹುಡುಗಿ ಕೂಡಾ
ಒಮ್ಮಿಂದೊಮ್ಮಲೇ ಸ್ಥಾಯಿ ಭಾವಗಳು
ಸಂಚಾರಿ ಭಾವಗಳಾಗುತ್ತವೆ-
– ಬಸ್ಸಿನ ಹಾರ್ನ್‌ ಶಬ್ದಕ್ಕೆ;
ಉತ್ಸಾಹ ಚಡಪಡಿಕೆಯಾಗುತ್ತದೆ
ಆ ಕ್ಷಣದಲ್ಲಿ ಹುಡುಗಿ ತಲ್ಲೀನಳಾಗುತ್ತಾಳೆ
ರಂಗದ ಮೇಲಿನ ನಟಿಯಂತೆ
ತನ್ನ ಪಾತ್ರದಲ್ಲಿ
ಇಳಿಯುವ ಹತ್ತುವ ನೂರಾರು ಕಣ್ಗಳ ದೃಷ್ಟಿ
ಕೆಂಪು ಕೆಂಪು ಹುಡುಗಿಯ ಮೊಗ
ಮರುಕ್ಷಣ –
ಸ್ತಬ್ದವಾದ ಆ ತಾಣ
ಮುಂದೋಡಿದ ಬಸ್ಸು
ಮೇಲೇರಿದ ಧೂಳಿನಲ್ಲಿ ಮುಚ್ಚಿದ ಹುಡುಗಿ

ಪುಟ್ಟ ತಮ್ಮ ಪೀಪಿ ತರಲು ಹೇಳಿದ ನೆನಪು
ಹುಡುಗಿ ಕುಕ್ಕರಿಸುತ್ತಾಳೆ
ಕತೆ ಹೇಳುತ್ತದೆ
ಬಾಡಿದ ಹೂವಿನ ದಂಡೆ
ಸೋತ ಕೈಗಳಲ್ಲಿ ಜೋತಾಡುತ್ತಾ

* ವನಜಾ ಕೊಳಗಿ

Share16Tweet10SendShareShare
Next Post
ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

Comments 1

  1. Mamata hegde says:
    8 months ago

    Beautiful

    Reply

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.