ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಹಾಯಿದೋಣಿ

ನೀನಿಲ್ಲದೇ

ನೀನಿಲ್ಲದೇ

 

ಈಗೀಗ ನಿನ್ನ ನೆನಪಾಗುವುದಿಲ್ಲ
ಸಂಜೆಯಲ್ಲಿ ದುಡಿದ ಆಯಾಸ
ಕೈ ಬೀಸಿ ಕರೆಯುತ್ತದೆ
ಊರ ಹೊರಗಿನ ಮದ್ಯದಂಗಡಿ

ಮಂದ ಬೆಳಕಿನಲ್ಲಿ ಮುಖ ಕಾಣಿಸುದಿಲ್ಲ
ಮಾತು ಕೇಳಿಸುತ್ತವೆ
ಮೇಜಿನ ಮೇಲೆ ಗ್ಲಾಸಿನ ತುಂಬ
ಉಕ್ಕಿ ಹರಿಯುವ ಬಿಯರು
ಬೆರಳ ಸಂದಿಯಲ್ಲಿ ಅರ್ಧ
ಉರಿದ ಸಿಗರೇಟು
ನಿನ್ನ ನೆನಪಾಗುವುದಿಲ್ಲ

ಊಟದ ಶಾಸ್ತ್ರ ಮುಗಿಸುತ್ತೇನೆ
ಬೀದಿ ದೀಪಗಳು ನಿದ್ರಿಸುವುದಿಲ್ಲ
ಊರ ಜನರಿಗೆಲ್ಲ ಅರ್ಧ ಬೆಳಕಾಗಿರುತ್ತದೆ
ರಾತ್ರಿ ಪಾಳಿಯ ನಾಯಿಗಳು ಬೊಗಳುತ್ತಿರುತ್ತವೆ
ಒಬ್ಬೊಂಟಿ ನಾನು ರಸ್ತೆಯಲ್ಲಿ
ನಿನ್ನ ನೆನಪಾಗುವುದಿಲ್ಲ

ಯಾವ ತೊಂದರೆ ಇಲ್ಲದೆ ಮನೆ ಸೇರುತ್ತೇನೆ
ಬಾಗಿಲು ಹಾಕುವುದ ಮರೆಯುವುದಿಲ್ಲ
ಮಂಚ, ಹಾಸಿಗೆಯೇ ಬೇಕೆಂದಿಲ್ಲ
ನೆಲದ ಮೇಲೆ ಮಲಗುತ್ತೇನೆ ಕಣ್ಣು ಮುಚ್ಚಿ
ಕನಸುಗಳಿರುತ್ತವೆ
ನೀನಿರುವುದಿಲ್ಲ..

* ಕಾರ್ತಿಕ ಹುಂಡಿಮಾಳ

Share9Tweet6SendShareShare
Next Post
ಜಲಕ್ಕಿಂತ ಮಲಿನ ಮನಸುಗಳು

ಜಲಕ್ಕಿಂತ ಮಲಿನ ಮನಸುಗಳು

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.