ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಪರಂಪರೆ

ತಾನೇ ಕಟ್ಟಿಸಿದ ದೇಗುಲದ ಮಹಡಿಯಿಂದ ಜಿಗಿದನಾ ಆ ರಾಜ?

ತಾನೇ ಕಟ್ಟಿಸಿದ ದೇಗುಲದ ಮಹಡಿಯಿಂದ ಜಿಗಿದನಾ ಆ ರಾಜ?

Pic: Girvani M H

ನಮ್ಮ ಯಾವುದೇ ಅದ್ಭುತ ದೇವಾಲಯಗಳನ್ನು ತೆಗೆದುಕೊಂಡರೂ ಅದರ ಹಿಂದೆ ಕುತೂಹಲಕಾರಿ ತ್ಯಾಗದ ಕಥೆಗಳಿವೆ.

ಹೊಯ್ಸಳರ ದೇವಾಲಯ ನೋಡಿದರೆ ಶಿಲ್ಪಿ ಜಕಣಾಚಾರಿಯ ಕತೆಯಿದೆ. ಹಂಪಿಗೆ ಬಂದರೆ ಕೃಷ್ಣದೇವರಾಯನ ಕತೆಯಿದೆ.
ಹಾಗೆಯೇ ತಂಜಾವೂರಿನ ಬೃಹದೀಶ್ವರ ದೇವಾಲಯದಲ್ಲೂ ರಾಜರಾಜ ಚೋಳನ ಕುತೂಹಲಕಾರಿ ಕತೆಗಳಿವೆ.
ಅಂಥ ಒಂದು ಕಥೆಯ ವ್ಯಥೆಯಿದು.
ದೇವಸ್ಥಾನದ ಪೂಜೆ ಯಾವ ಶಾಸ್ತ್ರದ ಪ್ರಕಾರ ನಡೆಯಬೇಕು ಎಂಬ ವಿಚಾರವು ದೊಡ್ಡದಾಗಿ ಬೆಳೆದು ಎಂದರೆ ಅದು ಚೋಳ ಸಾಮ್ರಾಜ್ಯದ ವಿನಾಶಕ್ಕೂ ಕಾರಣವಾಗಿಹೋದ ವ್ಯಥೆಯಿದು.

ತಂಜಾವೂರು ಬೃಹದೀಶ್ವರ ದೇವಾಲಯ ಕಟ್ಟಿ ಮುಗಿಸಿಯಾಗಿದೆ. ನ ಭೂತೋ ನ ಭವಿಷ್ಯತಿ ಎಂಬಂಥ ಶಿಲ್ಪಕಲಾಲಯವದು! ರಾಜನ ಕೀರ್ತಿಪತಾಕೆ ಫಟಫಟಿಸುತ್ತಿದೆ.

ಆದರೆ, ದೇವಾಲಯದ ಪೂಜೆಯು ಆಗಮ ಶಾಸ್ತ್ರದ ಪ್ರಕಾರ ಇರಬೇಕೊ ಇಲ್ಲವೇ ಸ್ಥಳೀಯ ತಮಿಳು ಶಾಸ್ತ್ರಗಳ ಪ್ರಕಾರ ಇರಬೇಕಾ ಎನ್ನುವ ವಿಚಾರದಲ್ಲಿ ರಾಜ ಹಾಗೂ ದೇವಾಲಯದ ಮುಖ್ಯಸ್ಥ ಸಿದ್ದ ರ ನಡುವೆ ತೀವ್ರವಾದ ಭಿನ್ನಾಭಿಪ್ರಾಯ ಏರ್ಪಡುತ್ತದೆ.

ಇದರಿಂದಾಗಿ ಸಾಮ್ರಾಜ್ಯದ ಪ್ರಜೆಗಳಲ್ಲಿ ಹಾಗೂ ಆಡಳಿತ ಮಂಡಳಿಗಳಲ್ಲೇ ಎರಡು ಗುಂಪುಗಳಾಗಿ ಬಿಡುತ್ತದೆ. ಅಷ್ಟು ಪರಿಶ್ರಮ, ಶ್ರದ್ಧೆ, ಆಸ್ಥೆಯಿಂದ ಕಟ್ಟಲಾದ ದೇವಾಲಯವೇ ಚೋಳರ ಅಂತಃ ಕಲಹಕ್ಕೆ ಕಾರಣವಾಗಿ ಬಿಡುತ್ತದೆ.

ವಿಷಯ ಎಲ್ಲಿ ತನಕ ಹೋಗುತ್ತದೆಂದರೆ ಒಂದು ಹಂತದಲ್ಲಿ ರಾಜರಾಜ ಚೋಳನಷ್ಟೇ ಬಲಿಷ್ ನಾಗಿದ್ದ ಅವನದೇ ಸೇನಾಧಿಪತಿ ಸಿದ್ಧನು ರಾಜರಾಜ ಚೋಳನ ವಿರುದ್ಧವೇ ಸೈನಿಕ ಕಾರ್ಯಾಚರಣೆಗೂ ಯೋಚಿಸಿ ಬಿಡುತ್ತಾನೆ.

ಇದರಿಂದ ಮನನೊಂದ ರಾಜರಾಜ ಚೋಳ ದೇವಾಲಯದ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟ ಎನ್ನುತ್ತದೆ ಕೆಲವು ಮಾಹಿತಿಗಳು.
ರಾಜನನ್ನು ದೇವರ ಸಮವಾಗಿ ನೋಡುತ್ತಿದ್ದ ಪ್ರಜೆಗಳು ರಾಜ ಬೃಹದೀಶ್ವರನ ಗರ್ಭಗುಡಿಗೆ ಹೋದವ ಮತ್ತೆ ವಾಪಸ್ ಬರದೆ ಅಲ್ಲೇ ಲೀನವಾಗಿ ಬಿಟ್ಟ ಎಂದು ನಂಬಿದರಂತೆ.

ರಾಜರಾಜ ಚೋಳನ ಸಾವಿನಿಂದ ಸಾಮ್ರಾಜ್ಯದಲ್ಲಿ ಅಪಾರ ಒಡಕು ಉಂಟಾಗಿ ಶತ್ರುಗಳು ಸೇರಿಕೊಳ್ಳುತ್ತಾರೆ. ಅಂತಃಕಲಹಗಳು ಭುಗಿಲೇಳುತ್ತದೆ. ಕೊನೆಗೆ ಹೊಯ್ಸಳರು ಹಾಗೂ ಪಾಂಡ್ಯರು ಚೋಳ ಸಾಮ್ರಾಜ್ಯದ ಮೇಲೆರಗಿ ಚೋಳರನ್ನು ಓಡಿಸಿ ಬಿಡುತ್ತಾರೆ.

ಅಪಾರ ಭಕ್ತಿ, ಹೆಮ್ಮೆ, ಪ್ರೀತಿ, ಅನನ್ಯ ವಾಸ್ತು ಶಿಲ್ಪ, ಸಿರಿ ಸಂಪತ್ತು ಚಿನ್ನದಿಂದ ತುಂಬಿಸಿದ್ದ ದೇವಾಲಯವೇ ಮುಂದೊಂದು ದಿನ ಅಹಂ ನ ಮೇಲಾಟದಲ್ಲಿ ಸಾಮ್ರಾಜ್ಯದ ಅಳಿವಿಗೆ ಕಾರಣವಾಗಿ ಬಿಡುತ್ತದೆ.

ಒಟ್ಟಿನಲ್ಲಿ ಬೃಹದೀಶ್ವರ ದೇವಾಲಯ ಒಂದು ಶಾಪಗ್ರಸ್ತ ದೇವಾಲಯ ಎನ್ನುತ್ತಾರೆ ಕೆಲವರು!

 

ಇಲ್ಲಿ ಬಂದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆಯೂ ಇದೆಯಂತೆ! ಈ ದೇವಸ್ಥಾನ ಕಟ್ಟಿದ ಮೇಲೆಯೇ ಚೋಳರು ಅಧಿಕಾರ ಕಳೆದುಕೊಂಡರು. ಹೊಯ್ಸಳ ದೊರೆಗಳ ಆಕ್ರಮಣದಿಂದ ಸಾಮ್ರಾಜ್ಯ ತೊರೆಯಬೇಕಾಯಿತು.

ಹೀಗಾಗಿ ಇವತ್ತಿಗೂ ಇಲ್ಲಿಗೆ ಭೇಟಿ ಕೊಟ್ಟ ಇಂದಿರಾಗಾಂಧಿ ಕೆಲವೇ ದಿನಗಳಲ್ಲಿ ಹತ್ಯೆಯಾದರು.
ಎಂಜಿಆರ್ ಆರು ತಿಂಗಳಲ್ಲೇ ಅಧಿಕಾರ ಕಳೆದುಕೊಂಡರು ಎಂದೆಲ್ಲ ಹೇಳಲಾಗುತ್ತದೆ.

ಭಕ್ತಿ, ಪವರಿನ ಮೇಲಾಟ, ಶಕ್ತಿ ಪ್ರದರ್ಶನ, ಧಾರ್ಮಿಕ ಗೊಂದಲಗಳು ಆಗಲೂ ಇದ್ದವು ಎಂಬುದಂತೂ ದಿಟ.
ಅದೇನೇ ಇದ್ದರೂ ಸಾವಿರ ವರ್ಷಗಳ ಮೇಲೂ ಬೃಹದೀಶ್ವರ ಬೃಹದಾಕಾರವಾಗಿ ನಿಂತೇ ಇದ್ದಾನೆ.

ಪೂಜೆ ಯಾವ ಶಾಸ್ತ್ರದಲ್ಲಿ ನಡೆದರೇನು?
ಇವತ್ತು ಅಲ್ಲಿಗೆ ಬರುವ ಮಂದಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.

ಅಂದು ರಾಜ ರಾಜ ಚೋಳನ ಅಂತರಂಗದಲ್ಲಿ ಅದೆಷ್ಟು ತಳಮಳಗಳಿದ್ದವೊ ಯಾರಿಗೂ ಕಲ್ಪಿಸಲು ಪುರಸೊತ್ತಿಲ್ಲ.

ದೇವಾಲಯದ ಸೊಬಗಿಗೆ ಮಾರು ಹೋಗುತ್ತ ವಾವ್! ಸಕತ್ತಾಗಿದೆ, ಸೂಪರ್ಬ್ ಎನ್ನುವ ಉದ್ಘಾರ ಹಾಗೂ ನಾವೂ ಯಾವುದೋ ರಾಜರ ಯುಗಕ್ಕೆ ವಾಪಸ್ ಹೋದೆವು ಎಂದುಕೊಳ್ಳುವುದು ಮಾತ್ರ ನಮ್ಮಿಂದ ಸಾಧ್ಯ.

ಅಂಥ ಅನನ್ಯ ಅನುಭವಕ್ಕೆ ಸಾಕ್ಷಿಯಾಗಲು ಕಾರಣರಾದ ಅಂದಿನ ರಾಜರುಗಳಿಗೆ ನಮೋ ನಮಃ.
* ಗೀರ್ವಾಣಿ

Share10Tweet6SendShareShare
Next Post
ಗಾಂಧಾರಿ ಕಣ್ಣು ತೆರೆದಾಗ!

ಗಾಂಧಾರಿ ಕಣ್ಣು ತೆರೆದಾಗ!

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.