ನಿನ್ನಾ ಒಂದೂ ಕರೆಗಾಗಿ ಕಾದಿರುವೆ
ಇನ್ನೂ ಯಾತಕೆ ಮನಸಾಗದೂ ನಿನಗೆ?
ನಿನ್ನಾ ಒಂದೂ ಕರೆಗಾಗಿ ಕಾದಿರುವೆ
ಇನ್ನೂ ಯಾತಕೆ ಮನಸಾಗದೂ ನಿನಗೆ?
ತಡೆಯದು ಈ ಜೀವಾ
ದೂರ ಇರುವ ನೋವಾ ||
ಈ ಒಂಟಿ ಜೀವನ
ಸಾಕಾಗಿ ಹೋಗಿದೆ
ಸನಿಹಾನ ಬಯಸುತಿದೆ ಹೃದಯಾ
ಆ ಸ್ವರ್ಗದಾ ಸುಖ
ಬೇಡಾಗಿದೆ ನನಗೆ
ಆನಂದ ನಿನ್ನಿಂದ ಇನಿಯಾ
ಆಹ್ಲಾದ ನಿನ್ನಿಂದ ಇನಿಯಾ ||
ನನ್ನನ್ನು ಮರೆತೂ ನೀ
ಆರಾಮವಾಗಿರುವೆ
ನನಗಿಲ್ಲಿ ನಿನದೇ ಗುಂಗಾಗಿದೆ
ಸಂತೋಷ ಸಂತೋಷ
ಸಂತೋಷ ನಿನ್ನಿಂದ
ನಿನ್ನಿಂದಲೇ ಜೀವ ರಂಗಾಗಿದೆ
ನಿನ ಭಾವವೇ ನನ್ನ ಉಸಿರಾಗಿದೆ ||









