ನೀನು ಹಚ್ಚಿಟ್ಟಾ ಪ್ರೇಮದ ದೀಪಾ
ಇಂದು ಮನೆಯಾ ಬೆಳಗುತಿದೆ
ನೀನು ಹಚ್ಚಿಟ್ಟಾ ಪ್ರೇಮದ ದೀಪಾ
ಇಂದು ಮನೆಯಾ ಬೆಳಗುತಿದೆ
ಇಂದು ಮನೆಯಾ ಬೆಳಗುತಿದೆ ||
ಹೊಸಿಲಲಿ ನಿರೀಕ್ಷೆಯ ದೀಪಾ
ಕಿಟಕಿಯಲ್ಲಿ ಪ್ರತೀಕ್ಷೆಯ ದೀಪಾ
ಬೆಳಗುತಿವೇ ಬೆಳಗುತಿವೇ
ನಿನ್ನಾ ಕಾರಣಾ |
ದೇವರಾ ಮನೆಯೆದುರು
ನಂಬಿಕೆಯಾ ಸಾಲು ದೀಪಾ
ಶ್ರದ್ಧೆಯಿಂದ ಬೆಳಗುತಿವೇ
ನೀನೇ ಕಾರಣಾ ||
ನೀನು ಹಚ್ಚಿಟ್ಟಾ ಪ್ರೇಮದ ದೀಪಾ
ಇಂದು ಮನೆಯಾ ಬೆಳಗುತಿದೆ ||
ಕಣ್ಣಿನಲ್ಲಿ ನಗುವಿನ ದೀಪಾ
ಮಾತಿನಲ್ಲಿ ಸ್ನೇಹದ ದೀಪಾ
ಬೆಳಗುವುದನು ಅರಿತಿರುವೆ ನಾ
ನಿನ್ನಾ ಕಾರಣಾ |
ಮುನ್ನಡೆಯುವ ದಾರಿಯಲ್ಲಿ ನಾ
ಮಂದಡಿಯಾ ಧೈರ್ಯದಿ ಇಡಲು
ಸಾಲುಸಾಲು ದೀಪದ ಬೆಳಕಿದೆ
ನೀನೇ ಕಾರಣಾ ||
ನೀನು ಹಚ್ಚಿಟ್ಟಾ ಭಾವದ ಹಣತೆ
ಇಂದು ಮನವಾ ಬೆಳಗುತಿದೆ
ನೀನು ಹಚ್ಚಿಟ್ಟಾ ಭಾವದ ಹಣತೆ
ಇಂದು ಮನವಾ ಬೆಳಗುತಿದೆ
ಇಂದು ಮನವಾ ಬೆಳಗುತಿದೆ ||
https://www.youtube.com/watch?v=UU5vVqmYztY
(ಇದೇ ಗೀತೆ ಕೇಳಲು ಈ ಯುಟ್ಯೂಬ್ ಲಿಂಕ್ ಕ್ಲಿಕ್ಕಿಸಿ)









