ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಹಾಯಿದೋಣಿ

ಭಾವಾನುಬಂಧ

ಭಾವಾನುಬಂಧ

ನಾ ನಡೆವ ದಾರಿಯಲೀ ನೀನು

ನೆರಳಾದ ಹಾಗೆ ಅನಿಸುತಿದೆ

ನಾ ನೆಡುವ ಹೂಗಿಡಗಳಿಗೇ

ಮಳೆಯಾದ ಹಾಗೆ ಅನಿಸುತಿದೆ |

ನಾ ದಣಿದು ಬಂದಾಗ ನೀನು

ತಂಗಾಳಿಯಂತೆ ಅನಿಸುತಿದೆ

ತಂಗಾಳಿಯಾ ಸುಳಿಯಾಗಿ ನೀ

ಸ್ಪರ್ಶಿಸಿದ ಹಾಗೆ ಅನಿಸುತಿದೆ ||

 

ಪ್ರತಿ ಬೆಳಗಿನಾ ಪ್ರಥಮ ಕಿರಣಾ

ಆಹ್ಲಾದವಾಗಿರುವೇ ನೀನು

ಪ್ರತಿ ದಿವಸದಾ ಪ್ರತಿ ಘಳಿಗೆಯಾ

ಆರಂಭವಾಗಿರುವೆ ನೀನು

ಪ್ರತಿ ಹಾಡಿನಾ ಪ್ರತಿ ಸಾಲಿನಾ

ಆನಂದವಾಗಿರುವೆ ನೀನು

ಉಸಿರಾಡುವಾ ಪ್ರತಿ ಉಸಿರಿನಾ

ಉಸಿರಾಗಿಹೋಗಿರುವೇ ನೀನು ||

 

ನೆರಳಾದ ಹಾಗೆ ಅನಿಸುತಿದೆ

ಮಳೆಯಾದ ಹಾಗೆ ಅನಿಸುತಿದೆ

ತಂಗಾಳಿಯ ಸುಳಿಯಾಗಿ ನೀ

ಸ್ಪರ್ಶಿಸಿದ ಹಾಗೆ ಅನಿಸುತಿದೆ ||

 

ಪ್ರತಿ ಇರುಳಲಿ ಬೆಳಕು ಚೆಲ್ಲೋ

ದೀಪದೊಳು ಕಾಂತಿಯು ನೀನು

ಪ್ರತಿ ಬೇಸರಾ ಕಳೆದು ಸಂತೈಸೋ

ಆತ್ಮೀಯ ಭಾವವು ನೀನು |

ಆಕಾಶದಾ ಆ ಚಂದ್ರನಾ

ದಿವ್ಯ ಶಾಂತತೆಯಾ ಮುದ್ರೆ

ಏಕಾಂತದೀ ಈ ಬಡವಿಗೆ

ನೀ ಹಾಡೋ ಜೋಗುಳವೇ ನಿದ್ರೆ

ನೀ ಹಾಡೋ ಜೋಗುಳದೇ ನಿದ್ರೆ |

 

ನೆರಳಾದ ಹಾಗೆ ಅನಿಸುತಿದೆ

ಮಳೆಯಾದ ಹಾಗೆ ಅನಿಸುತಿದೆ

ತಂಗಾಳಿಯ ಸುಳಿಯಾಗಿ ನೀ

ಸ್ಪರ್ಶಿಸಿದ ಹಾಗೆ ಅನಿಸುತಿದೆ ||

https://www.youtube.com/watch?v=UU5vVqmYztY

(ಇದೇ ಗೀತೆ ಕೇಳಲು ಈ ಯುಟ್ಯೂಬ್ ಲಿಂಕ್‌ ಕ್ಲಿಕ್ಕಿಸಿ)

Share9Tweet6SendShareShare
Next Post
ದೀಪದಾರಿ

ದೀಪದಾರಿ

Comments 1

  1. goutam bhat says:
    1 year ago

    nice one

    Reply

Leave a Reply Cancel reply

Your email address will not be published. Required fields are marked *

Recommended

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಶ್ರಾವಣ ಬಂತು…

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.