ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಗಗನದಲ್ಲಿ ಹೊಗೆ ಹೊಗೆ !

ಗಗನದಲ್ಲಿ ಹೊಗೆ ಹೊಗೆ !

ನೀಲಿ ಆಗಸದಲ್ಲಿ ತೇಲುವ ಹಡಗಿನಂತೆ ಹಾರುವ ವಿಮಾನದಲ್ಲಿ ಒಮ್ಮೆಯಾದರೂ ಪಯಣಿಸುವುದು ಪ್ರತಿಯೊಬ್ಬರ ಕನಸು. ಆ ಸ್ವಚ್ಛವಾದ ಬೃಹತ್ ವಿಮಾನ ನಿಲ್ದಾಣ, ಆ ಫಳಫಳ ಹೊಳೆಯುವ ವಿಮಾನಗಳು, ಫಳ್ಳೆಂದು ನಗುವ ಗಗನಸಖಿಯರು, ಉದ್ದುದ್ದ ಕಾಲಿನ ಪೈಲಟ್​ಗಳು, ಸೂಟುಬೂಟು ತೊಟ್ಟು ಕೈಲಿ ಬ್ರೀಫ್​ಕೇಸ್ ಹಿಡಿದು, ನಕ್ಕರೆ ಡಿಗ್ನಿಟಿ ಕಡಿಮೆ ಆಗುತ್ತದೆಯೇನೋ ಎಂದು ಓಡಾಡುವ ಉದ್ಯಮಿಗಳು.. ವಿಮಾನವೆಂಬ ದೇವಲೋಕದ ವಾಹನವನ್ನು ಭ್ರಮಾಲೋಕದಲ್ಲಿರಿಸಿವೆ. ಮೊದಲ ಸಲ ವಿಮಾನ ಹತ್ತಿದವರಾದರೆ ಗಗನದಲ್ಲಿ ಸಂಚರಿಸುವಾಗ ಮೋಡಗಳ ನಡುವೆ ನಾರದನೋ ಹನುಮಂತನೋ ಎದುರಾಗಬಹುದೇ? ಎಂದು ಇಣುಕಿ ನೋಡುತ್ತೇವೆ. ಎಂಥ ದಟ್ಟದರಿದ್ರ ದೇಶವೇ ಆದರೂ ವಿಮಾನ ನಿಲ್ದಾಣಗಳು ಮಾತ್ರ ಥಳಥಳ.. ವಿಮಾನಗಳು ಮಾತ್ರ ಫಳಫಳ.

ಈ ಥಳುಕುಬಳುಕಿನ ಹಿಂದೆ ಅತಿಶಯವಾದ ದುರಂತಕ್ಕೆ ಮುನ್ನುಡಿ ಇದೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ನಾಣ್ಣುಡಿಗೆ ಸಾಕ್ಷೀಭೂತವಾಗಿದೆ.

ಸ್ವಚ್ಛ ಆಕಾಶದಲ್ಲಿ ಅತಿವೇಗದಲ್ಲಿ ಸಾಗುವ ವಿಮಾನಗಳು ಹೊಗೆ ಉಗುಳುವುದನ್ನು ನಾವು ಕಂಡಿಲ್ಲ. ಹೆಚ್ಚೆಂದರೆ ಯುದ್ಧ ವಿಮಾನಗಳು, ಲಘುವಿಮಾನಗಳು ಹೊಗೆ ಉಗುಳುತ್ತ ಸಾಗಿದ್ದನ್ನು ನಾವು ಕಂಡಿರುತ್ತೇವೆ. ಆದರೆ ಎಲ್ಲ ವಿಮಾನಗಳೂ ಗಗನದಲ್ಲಿ ಅಪಾರ ಪ್ರಮಾಣದ ಮಾಲಿನ್ಯಕಾರಕಗಳನ್ನು ಹೊರಬಿಡುತ್ತದೆ ಮತ್ತು ಅದು ಅತ್ಯಂತ ಅಪಾಯಕಾರಿ ಅನ್ನೋದು ಗೊತ್ತೆ ?

ಜನಸಂಖ್ಯೆ ಹೆಚ್ಚುತ್ತಿದ್ದಂತೆ ಸಾಗಾಣಿಕೆಯ ಅವಶ್ಯಕತೆ ಹೆಚ್ಚುತ್ತಿದೆ. ಉದ್ಯೋಗಾವಕಾಶ ಹೆಚ್ಚುತ್ತಿದ್ದಂತೆಯೇ ಪ್ರಯಾಣದ ಅವಶ್ಯಕತೆ ಹೆಚ್ಚುತ್ತಿದೆ. ಜನರ ಕೈಲಿ ದುಡ್ಡು ಓಡಾಡುತ್ತಿದ್ದಂತೆಯೇ ಸೈಕಲ್ ಹೊಡೆಯುತ್ತಿದ್ದೋರು ಬೈಕ್ ತಗೋತಿದಾರೆ. ಬೈಕ್ ಓಡಿಸ್ತಿರೋರು ಕಾರು ತಗೋತಿದಾರೆ. ಒಟ್ಟಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಹೊಗೆ, ಧೂಳುಗಳಿಂದ ಪರಿಸರ ಮಾಲಿನ್ಯ ಉಂಟಾಗ್ತ ಇದೆ. ಇದು ಮಾಲಿನ್ಯ ಅಂದ್​ಕೂಡ್ಲೆ ಮುಂದೆ ಬರೋ ಚಿತ್ರಣ. ವಿಮಾನಗಳಿಂದ ಉಂಟಾಗೋ ವಾಯು ಮಾಲಿನ್ಯವನ್ನು ಯಾರೂ ಲೆಕ್ಕಕ್ಕೇ ತಗೋತಾ ಇಲ್ಲ. ಯಾಕೆಂದರೆ ಯಾರ ಕಣ್ಣಿಗೂ ಇದು ಕಾಣುವುದಿಲ್ಲ.

ಜಗತ್ತಿನಲ್ಲಿ ಪ್ರತಿದಿನ ಹಾರಾಟ ನಡೆಸುವ ವಿಮಾನಗಳ ಒಟ್ಟೂ ಸಂಖ್ಯೆ 3 ಲಕ್ಷ ! ಅವುಗಳಲ್ಲಿ ಪ್ರಯಾಣಿಕರ ವಿಮಾನ 93000. ವೈಯಕ್ತಿಕ ವಿಮಾನಗಳು, ಸರಕು ಸಾಗಣೆ ವಿಮಾನಗಳು ಗಣನೀಯ ಪ್ರಮಾಣದಲ್ಲಿವೆ.


ವಿಮಾನಗಳಿಗೆ ಪೆಟ್ರೋಲಿಯಂ ಸ್ಪಿರಿಟ್ ಎಂಬ ಅತಿಶುದ್ಧ ಇಂಧನವೇ ಬೇಕಾಗುತ್ತದೆ. ಶುದ್ಧ ಡೀಸೆಲ್ ಬಳಸುವ ಜೆಟ್ ಟರ್ಬೈನ್ ಇಂಜಿನ್ ವಿಮಾನಗಳೂ ಇವೆ. ವಿಮಾನ ಇಂಧನದಲ್ಲಿ ಸಾವಿರಾರು ಬಗೆಯ ರಾಸಾಯನಿಕಗಳಿರುತ್ತವೆ.
ನ್ಯಾಷನಲ್ ಜಿಯಾಗ್ರಪಿಕ್ಸ್ ನಡೆಸಿದ ಅಧ್ಯಯನದಲ್ಲಿ ಗಗನ ಮಾಲಿನ್ಯದ ಕರಾಳ ಚಿತ್ರಣ ಸಿಗುತ್ತೆ. ಈ ಹಿಂದೆ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ಮಾತ್ರ ಹೆಚ್ಚು ಹೊಗೆ ಉಗುಳುತ್ತದೆ ಮತ್ತು ಮಾಲಿನ್ಯ ಸಂಭವಿಸುತ್ತದೆ ಅಂತ ತಿಳ್ಕೊಂಡಿದ್ರು. ಆದರೆ ಹೊಸ ಸಂಶೋಧನೆಗಳಿಂದ ಗಗನದಲ್ಲಿ ವಿಮಾನ ಮೋಡಗಳಿಗಿಂತ ಮೇಲೆ ಹಾರುತ್ತಿರುವಾಗಲೂ ಅಪಾರ ಪ್ರಮಾಣದ ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈ ಅಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್​ಗಳನ್ನು ಹೊರಸೂಸುತ್ತದೆ. ಇದು ವಾಹನಗಳ ಹೊಗೆಯಂತೆ ಕಣ್ಣಿಗೆ ಕಾಣುವುದಿಲ್ಲ. ಇದು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಅಲ್ಲದೇ ಅದರ ಅತಿಸೂಕ್ಷ್ಮ ಕಣಗಳು ನಿಧಾನಕ್ಕೆ ಗಾಳಿಯಲ್ಲಿ ಹರಡುತ್ತ ಭೂಮಿಗೆ ಇಳಿಯುತ್ತವೆ. ಉಸಿರಾಟದ ಮೂಲಕ ದೇಹ ಪ್ರವೇಶಿಸುವ ಇವು ಶ್ವಾಸಕೋಶದ ತೊಂದರೆ, ಕ್ಯಾನ್ಸರ್​ಗಳಿಗೆ ಕಾರಣವಾಗುತ್ತಿವೆ.
ವಾಹನಗಳಿಂದ ಸೂಸುವ ಮಾಲಿನ್ಯ ಆ ಪ್ರದೇಶಕ್ಕೆ ಸೀಮಿತ. ಆದರೆ ವಿಮಾನ ಸೂಸುವ ಮಾಲಿನ್ಯ ಒಂದು ಖಂಡದಿಂದ ಇನ್ನೊಂದು ಖಂಡಕ್ಕೂ ವ್ಯಾಪಿಸಬಲ್ಲವು. ಅತಿ ಎತ್ತರಕ್ಕೆ ಹಾರುವ ವಿಮಾನ ಸೂಸಿದ ಮಾಲಿನ್ಯ ಗಾಳಿ ಬೀಸುವ ದಿಕ್ಕಿನಲ್ಲಿ ಹತ್ತು ಸಾವಿರ ಕಿಲೋಮೀಟರ್​ವರೆಗೂ ಸಾಗಿ ಭೂಮಿ ತಲುಪುತ್ತವೆ. ಕಂಪ್ಯೂಟರ್ ಆಧಾರಿತ ನಿಖರ ಸಮೀಕ್ಷೆಯಿಂದ ಏಷ್ಯಾದಲ್ಲಿ ಹಾರಾಟ ನಡೆಸಿದ ಒಂದು ವಿಮಾನ ಸೂಸಿದ ಮಾಲಿನ್ಯ ಗಾಳಿಯಲ್ಲಿ ತೇಲುತ್ತ ತೇಲುತ್ತ ದಕ್ಷಿಣ ಅಮೇರಿಕಾ ನೆಲದವರೆಗೂ ತಲುಪಬಲ್ಲದು ಅಂತ ಸಾಬೀತಾಗಿದೆ.


ಈ ಅಧ್ಯಯನದ ಪ್ರಕಾರ ವಿಮಾನ ಅಪಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಜಗತ್ತಿನಲ್ಲಿ ವರ್ಷಕ್ಕೆ ಸರಾಸರಿ 1000. ಆದರೆ ವಿಮಾನಗಳು ಹೊರ ಸೂಸುವ ವಿಷಕಾರಕ ಅಂಶಗಳನ್ನು ಉಸಿರಾಡುವ ಮೂಲಕ ಸಾಯುವವರ ಸಂಖ್ಯೆ ಜಗತ್ತಿನಲ್ಲಿ ವರ್ಷಕ್ಕೆ ಸುಮಾರು 8000. ಯಾಕೆಂದರೆ ಅದು ಪಸರಿಸುವ ವ್ಯಾಪ್ತಿ ಬಹುದೊಡ್ಡದು. ಟೇಕ್ ಆಫ್ ಮತ್ತು ಲ್ಯಾಂಡಿAಗ್ ಪ್ರದೇಶದ ಸುತ್ತಮುತ್ತ ವಿಮಾನದ ಹೊಗೆ ಸೇವನೆಯಿಂದ ಪ್ರತಿವರ್ಷ 2000 ಜನರು ಸಾಯುತ್ತಾರೆ ಅಂತ ಕಂಡುಹಿಡಿದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಪ್ರಕಾರ ಶ್ವಾಸಕೋಶ ಕ್ಯಾನ್ಸರ್, ಉಸಿರಾಟದ ಖಾಯಿಲೆಗಳು ಇಂಥ ಮಾಲಿನ್ಯದಿಂದ ಹೆಚ್ಚುತ್ತಿವೆ.


ಭಾರತದಲ್ಲಿ ವಿಮಾನ ಮಾಲಿನ್ಯದಿಂದ ಸಾಯುವವರ ಸಂಖ್ಯೆ ಪ್ರತಿವರ್ಷ ಸರಾಸರಿ 1650. ಇದು ಪ್ರಪಂಚದಲ್ಲೇ ಹೆಚ್ಚಿನ ಸರಾಸರಿ. ಆದರೆ ಇವೆಲ್ಲವೂ ಭಾರತದ ನಗರಗಳಿಂದ ಹಾರಾಟ ನಡೆಸಿದ ವಿಮಾನ ಮಾಲಿನ್ಯದಿಂದ ಮಾತ್ರವೇ ಅಲ್ಲ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಅತಿ ಎತ್ತರದಲ್ಲಿ ಸಾಗುವ ವಿಮಾನಗಳು ಸೂಸುವ ವಿಷಕಾರಕ ಹೊಗೆ ಖಂಡಾAತರ ಪ್ರಯಾಣ ಮಾಡಿ ಭಾರತದ ನೆಲಕ್ಕೆ ಬಂದಿಳಿದು ಮಲಿನಗೊಳಿಸುವುದೂ ಸಾವಿಗೆ ಕಾರಣವಾಗುತ್ತದೆ ಎಂದು ಎನ್​ವಿರಾನ್​ಮೆಂಟಲ್ ಸೈನ್ಸ್ ಆಂಡ್ ಟೆಕ್ನಾಲಜಿ ಪತ್ರಿಕೆಯ ಅಧ್ಯಯನ ವರದಿ ಹೇಳಿದೆ.


ವಿಶ್ವಸಂಸ್ಥೆ ಪರಿಸರ ಅಧ್ಯಯನ ಪ್ರಕಾರ ಜಗತ್ತಿನಲ್ಲಿ ವರ್ಷಕ್ಕೆ ವಾಯುಮಾಲಿನ್ಯದಿಂದ ಸಾವಿಗೀಡಾಗುವವರ ಸಂಖ್ಯೆ ಸುಮಾರು 10 ಲಕ್ಷ. ಇದರಲ್ಲಿ ಗಗನ ಮಾಲಿನ್ಯದ ಪಾಲು ತುಂಬ ಕಡಿಮೆ. ಆದರೂ, ಗಗನ ಮಾಲಿನ್ಯ ದೇಶಗಳ ಗಡಿ ಮೀರಿ ಪಸರಿಸುವುದರಿಂದ ಹಾಗೂ ವಿಮಾನಗಳ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಈಗಲೇ ಉಪಕ್ರಮ ಕೈಗೊಳ್ಳದಿದ್ದರೆ ಮುಂದೆ ಅಪಾಯ ಖಂಡಿತ. ಜೊತೆಗೆ ವಿಮಾನ ಸೂಸುವ ರಾಸಾಯಿಕಯುಕ್ತ ಹಬೆ ಮತ್ತು ಇತರ ಅಂಶಗಳು ಓಝೋನ್ ವಲಯದ ಮೇಲೂ ಪರಿಣಾಮ ಬೀರಬಲ್ಲವು ಎಂದು ಎಚ್ಚರಿಸಿದೆ.

Share8Tweet5SendShareShare
Next Post
ಹಲ್ಲಿ ಓದಿದ ಅಕ್ಷರ

ಹಲ್ಲಿ ಓದಿದ ಅಕ್ಷರ

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.