ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಎಸ್.ಎಂ.ಕೃಷ್ಣ; ಅಪರೂಪದ ವಿವರಗಳು

ಎಸ್.ಎಂ.ಕೃಷ್ಣ; ಅಪರೂಪದ ವಿವರಗಳು

Union External Affairs Minister SM Krishna shaking hands with Iranian Finance Minister Shamsoddin Hosseini before a meeting at Hyderabad House in New Delhi on Thursday. Photo by Shekhar Yadav 08/07/2010

  

 

ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್.‌ ಆರ್‌. ರಂಗನಾಥ್‌ ಎಸ್‌.ಎಂ.ಕೃಷ್ಣ ಅವರ ಬಹುಮುಖೀ ವ್ಯಕ್ತಿತ್ವದ ಅಪರೂಪದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ..   

*** 

ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಎಸ್‌.ಎಂ. ಕೃಷ್ಣ ಅವರನ್ನು ಬರಿಯ ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ಅವರ ವ್ಯಕ್ತಿತ್ವದ ಹಲವು ಮುಖಗಳು ಅರಿವಿಗೆ ಬರದೇ ಇರಬಹುದು. ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಅವರು ವಜ್ರಗಳಲ್ಲೇ ಅತ್ಯುತ್ತಮ ವಜ್ರ!     

* ರಾಮಕೃಷ್ಣಾಶ್ರಮದಂಥ ಸಾಂಪ್ರದಾಯಕ ಸಂಸ್ಥೆಯಲ್ಲಿ ಶಿಕ್ಷಣ ಪಡೆದು, ಉನ್ನತ ಶಿಕ್ಷಣವನ್ನು ಪಾಶ್ಚಾತ್ಯ ವಾತಾವರಣದಲ್ಲಿ (ಅಮೆರಿಕ)ದಲ್ಲಿ ಪಡೆದವರು. ಆರಂಭದಲ್ಲಿ ಇವರನ್ನು ಅಮೆರಿಕ ಕೃಷ್ಣ ಅಂತಲೇ ಇಲ್ಲಿ ಕರೆಯುತ್ತಿದ್ದರು.  

* ಮೊದಮೊದಲು ತಮ್ಮ ವಸ್ತ್ರವಿನ್ಯಾಸವನ್ನು ಸ್ವತಃ ಮಾಡಿಕೊಳ್ಳುತ್ತಿದ್ದರು. ಅವರ ವಾರ್ಡ್‌ರೋಬ್‌ ಸಂಗ್ರಹ ಬಹಳ ದೊಡ್ಡದಿತ್ತು. ಯಾವ ಸಂದರ್ಭದಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬ ಬಗ್ಗೆ ಸೂಕ್ಷ್ಮ ಅರಿವಿತ್ತು.  

* ವಿದೇಶದಲ್ಲಿ ಓದಿದ್ದರೂ ಭಾರತೀಯ ಕಲೆಗಳ ಬಗ್ಗೆ ಅಪಾರ ಒಲವಿತ್ತು. ವಿಶೇಷವಾಗಿ ಕರ್ನಾಟಕ ಸಂಗೀತ ರಸಗ್ರಹಣ ಶಕ್ತಿ ಬಹಳ ಆಳವಾಗಿತ್ತು. ಅದು ಹೇಗೆ ಸಿದ್ಧಿಸಿತ್ತು ಅಂತ ಅವರಿಗೂ ಗೊತ್ತಿರಲಿಲ್ಲ!  

* ರಾಮಕೃಷ್ಣ ಹೆಗಡೆ ಬಿಟ್ಟರೆ, ಸಾಂಸ್ಕೃತಿಕ ಅಭಿರುಚಿ ಹೊಂದಿರುವ ರಾಜಕಾರಣಿ ಎಂದರೆ ಎಸ್‌.ಎಂ.ಕೃಷ್ಣ. ಅದರ ಜೊತೆ ಕ್ರೀಡೆಯಲ್ಲೂ ಅಪಾರ ಒಲವಿತ್ತು.  

 * ಟೆನಿಸ್‌ ಪ್ರಿಯರಾಗಿದ್ದ ಎಸ್‌.ಎಂ.ಕೃಷ್ಣ ಪ್ರತಿವರ್ಷದ ವಿಂಬಲ್ಡನ್‌ ಹಾಗೂ ಅಮೆರಿಕನ್‌ ಓಪನ್‌ ಟೆನ್ನಿಸನ್ನು ಇಂಗ್ಲೆಂಡ್‌ ಹಾಗೂ ಅಮೆರಿಕಕ್ಕೆ ಹೋಗಿಯೇ ವೀಕ್ಷಿಸುತ್ತಿದ್ದರು. ಪ್ರತಿ ಸಲ ಹೊರಟಾಗಲೂ ಯಾರಾದರೂ ಟೀಕಿಸಿದರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. 

* ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡಬ್ಲು.ಟಿ.ಎಫ್.‌ ಟೆನಿಸ್‌ ಟೂರ್ನಿ ಏರ್ಪಡಿಸಿ ದೊಡ್ಡ ದೊಡ್ಡ ಟೆನ್ನಿಸ್‌ ಆಟಗಾರರನ್ನು ಕರೆಸಿ ಟೂರ್ನಿಯನ್ನು ಯಶಸ್ವಿಯಾಗಿಸಿದ್ದು ಅವರ ಹೆಗ್ಗಳಿಕೆ.  

* ಮುಖ್ಯಮಂತ್ರಿಯಾದಾಗ ಎಲ್ಲ ಮಾಜಿ ಮುಖ್ಯಮಂತ್ರಿಗಳ ಮನೆಗೂ ಹೋಗಿ ಅವರ ಹಾರೈಕೆ ಪಡೆದು ಬಂದ ಏಕೈಕ ರಾಜಕಾರಣಿ ಎಸ್‌.ಎಂ.ಕೃಷ್ಣ.  

* ಅವರು ಕಾಂಗ್ರೆಸ್ಸಿಗರಾಗಿದ್ದರೂ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಅವರೊಡನೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ದ್ವೇಷರಾಜಕಾರಣದಿಂದ ಬಲುದೂರ.  

* ಒಮ್ಮೆ ವಿದೇಶಿ ನಿಯೋಗ ಬಂದಾಗ ಅಮೆರಿಕದ ಒಂದು ವಿಷಯದ ಬಗ್ಗೆ ವಿವರಣೆ ನೀಡುವಲ್ಲಿ ತಪ್ಪೆಸಗಿದ್ದರು. ಆಗ ಕೃಷ್ಣ ಅವರು ತಿದ್ದಿ ವಿವರಿಸಿ ಅವರನ್ನೇ ಆವಾಕ್ಕಾಗಿಸಿದ್ದರು.  

* ಕನ್ನಡ ಹಾಗೂ ಇಂಗ್ಲಿಷ್‌ ಮೇಲೆ ಅಪಾರ ಹಿಡಿತ ಇತ್ತು; ಎಲ್ಲಿ ಹೇಗೆ ಏನು ಮಾತಾಡಬೇಕೆಂಬ ಪ್ರಜ್ಞೆ ತುಂಬಾ ಇತ್ತು. 

* ತುಂಬಾ ಓದುತ್ತಿದ್ದರು. ಅವರ ಪುಸ್ತಕಭಂಡಾರ ಮತ್ತು ಜ್ಞಾನಭಂಡಾರ ದೊಡ್ಡದು.   

* ಸುಂದರಾಂಗ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಅವರು ಎಲ್ಲಿಯಾದರೂ ಹೋದರೆ ಅವರ ಜೊತೆ ಫೊಟೊ ತೆಗೆಸಿಕೊಳ್ಳಲು ಯುವಕ ಯುವತಿಯರು ಮುಗಿಬೀಳುತ್ತಿದ್ದರು.  

* ಡಾ.ರಾಜಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ ಸಮಯ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಬಗೆಹರಿಸಿ ಸೈ ಎನ್ನಿಸಿಕೊಂಡರು. 

* ರಾಜಕಾರಣಿಯಾಗಿ ೬೦ ವರ್ಷ ಸಕ್ರಿಯರಾಗಿದ್ದು ಏಳುಬೀಳುಗಳಿದ್ದರೂ ಸ್ಥಿರವಾಗಿ ನಿಂತ ವ್ಯಕ್ತಿತ್ವ.  

* ಆಹಾರಪ್ರಿಯರಾಗಿದ್ದರು ಎಸ್‌.ಎಂ.ಕೃಷ್ಣ. ಬೆಂಗಳೂರಿನ ಜನಪ್ರಿಯ ಹೊಟೇಲುಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು.    

* ಅವರ ಆರೋಗ್ಯಕರ, ಸಮೃದ್ಧ, ತುಂಬು ಜೀವನ ಎಂಥವರೂ ಹೊಟ್ಟೆಕಿಚ್ಚುಪಡುವಂತಿದೆ; ಮಾದರಿಯಾಗೂ ಇದೆ. 
(ಸಂಗ್ರಹ) 

  

Share6Tweet4SendShareShare
Next Post
ಗಾರ್ಗಿಯ ಡೈರಿಯಿಂದ.. 

ಗಾರ್ಗಿಯ ಡೈರಿಯಿಂದ.. 

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.