ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಬಾಳ ಸಂಜೆಗೆಂದು ಬುತ್ತಿ ಕಟ್ಟಿಕೊಳ್ಳಿ

ಮುಸ್ಸಂಜೆ ಮಾತು

ಬಾಳ ಸಂಜೆಗೆಂದು ಬುತ್ತಿ ಕಟ್ಟಿಕೊಳ್ಳಿ

ಬಾಳ ಸಂಜೆಗೆಂದು ಬುತ್ತಿ ಕಟ್ಟಿಕೊಳ್ಳಿ!

ವಯಸ್ಸು ಇಳಿಮುಖವಾಗುತ್ತಿದೆ. 

ಜೀವನದ ಸಂಧ್ಯಾಕಾಲ ಸಮೀಪಿಸುತ್ತಿದೆ. 

ಮುಂದೆ ಕತ್ತಲಾಗುವುದಿದೆ. ದುಡಿಯುವ ರಟ್ಟೆಗಳು ನಿಶ್ಶಕ್ತ ಎನ್ನಿಸುವ ಸ್ಥಿತಿ ಬರಬಹುದು. ಕಣ್ಣು ಮಂಜು ಮಂಜಾಗಬಹುದು. ರೋಗಗಳು ಬಾಧಿಸಬಹುದು. ಸಂಸಾರದ ಭಾರ ಇನ್ನೂ ತಲೆಯಮೇಲಿದ್ದರೂ ಇರಬಹುದು. 

ವಿಶ್ರಾಂತಿಯ ವಯಸ್ಸಿನಲ್ಲಿ ಎದೆಭಾರ ಇಳಿಯದಿದ್ದರೆ ವಿಶ್ರಾಂತಿಗೆ ಎಲ್ಲಿದೆ ಅರ್ಥ? 

ಬಾಳ ಸಂಜೆ ಚಿಂತಾರಹಿತವಾಗಿರಬೇಕೆಂದರೆ ಸಾಕಷ್ಟು ಮೊದಲೇ ಯೋಜಿಸಿ ಹಣಕಾಸಿನ ಭದ್ರತೆ ಮಾಡಿಕೊಳ್ಳುವುದು ಅಗತ್ಯ. 

ಬಾಲ್ಯ, ಪ್ರೌಢ, ಯೌವನ, ವೃದ್ಧಾಪ್ಯ ಈ ನಾಲ್ಕು ಹಂತಗಳಲ್ಲಿ ಮನುಷ್ಯನ ಜೀವನ ಸಾಗಿ ಪಯಣ ಕೊನೆಗೊಳ್ಳುತ್ತದೆ. 

ಜೀವನದ ಎಲ್ಲ ಹಂತಗಳಲ್ಲೂ ಹಣಕಾಸಿನ ಪಾತ್ರ ಅತ್ಯಂತ ಪ್ರಮುಖವಾದುದು. ಸಂಸಾರದ ಸರಿಗಮದಲ್ಲಿ ಏರುಪೇರುಗಳು ಕಂಡುಬAದರೆ ತಾಳಿಕೊಳ್ಳಬಹುದು. ಆದರೆ ವಿಶೇಷವಾಗಿ ವೃದ್ದಾಪ್ಯದಲ್ಲಿ ಹಣಕಾಸಿಗಾಗಿ ಮಕ್ಕಳ ಮುಂದೆ, ಇನ್ನೊಬ್ಬರ ಮುಂದೆ ಕೈಚಾಚುವುದು ಅತ್ಯಂತ ಹೀನಾಯ. ಬುದ್ಧಿವಂತರಾದವರು ಅಂಥ ಪರಿಸ್ಥಿತಿಯನ್ನು ತಂದುಕೊಳ್ಳುವುದಿಲ್ಲ. ಇಂಥವರಿಗಾಗಿ ಹಲವಾರು ಪಿಂಚಣಿ ಯೋಜನೆಗಳಿವೆ. ಆಯ್ಕೆ ನಿಮ್ಮದು. 

ಮೊದಲೆಲ್ಲ ಸರಕಾರಿ ನೌಕರಿಯಲ್ಲಿದ್ದು ನಿವೃತ್ತರಾದರೆ ಮಾತ್ರ ಪಿಂಚಣಿ ದೊರೆಯುತ್ತಿದ್ದುದು ವಾಡಿಕೆ. ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಖಾಸಗಿ ಸೇವೆಗಳಲ್ಲಿ ನಿವೃತ್ತರಾದಾಗ ಒಂದಿಷ್ಟು ನಿವೃತ್ತಿ ಪರಿಹಾರ ಕೈಗಿಟ್ಟು ಮನೆಗೆ ಕಳಿಸುತ್ತಿದ್ದುದುಂಟು. ಅಸಂಘಟಿತ ವಲಯಗಳಲ್ಲಿ ನಿವೃತ್ತರಾದಮೇಲೆ ಬದುಕಿದ್ದೀರಾ ಸತ್ತಿದೀರಾ? ಮುಂದಿನ ಜೀವನ ಹೇಗೆ? ಎಂದು ವಿಚಾರಿಸಿಕೊಳ್ಳುವವರಿಲ್ಲ. ನಮಗೆ ಹಸಿವಾದರೆ ನಾವು ಊಟ ಮಾಡಬೇಕು ಎಂಬ ನಾಣ್ಣುಡಿಯಂತೆ ನಮಗೆ ಅವಶ್ಯಕವಿರುವ ಬುತ್ತಿಗಂಟನ್ನು ಬಾಳಸಂಜೆಗಾಗಿ ಮುಂಚಿತವಾಗಿಯೇ ತಯಾರಿ ಮಾಡಿಟ್ಟುಕೊಳ್ಳುವುದು ಒಳಿತು. 

ಖಾಸಗಿ, ಅರೆಖಾಸಗಿ ಮತ್ತು ಸರಕಾರಿ ಪಿಂಚಣಿ ಸೇವೆಗಳಲ್ಲಿ ಸಾಮಾನ್ಯ ಜನರ ಆಯ್ಕೆ ಸರಕಾರಿ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಾರಣ ವಿಶ್ವಾಸಾರ್ಹತೆ. ಅಂಥ ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಸರಕಾರೇತರ ಹಣಕಾಸು ಸಂಸ್ಥೆಗಳೂ ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿರಬಹುದು. ಆದರೆ ಸರಕಾರಿ ಯೋಜನೆಯಲ್ಲಿ ಸೇವಾಶುಲ್ಕ ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಹೀಗಾಗಿ ಇದು ಹೂಡಿಕೆಯ ಅತ್ಯುತಮ ಮಾರ್ಗವಾಗಿ ಗೋಚರಿಸುವುದು ಸಹಜ. ಖಾಸಗಿ ವಿತ್ತ ವಲಯದಲ್ಲಿ ಆಗೀಗ ವರದಿಯಾಗುತ್ತಿರುವ ಹಣಕಾಸು ಅವ್ಯವಹಾರಗಳೂ ಜನರು ದೀರ್ಘಕಾಲೀನ ಪಿಂಚಣಿ ಯೋಜನೆಯಲ್ಲಿ ಹಣ ಹೂಡಲು ಹಿಂದೆಮುಂದೆ ನೋಡಲು ಕಾರಣ. 

ಕೇಂದ್ರ ಪಿಂಚಣಿ ಯೋಜನೆಯಲ್ಲಿ 18ರಿಂದ 55 ವರ್ಷದೊಳಗಿನ ಅರ್ಹ ಭಾರತೀಯ ಪ್ರಜೆ ಹಣಹೂಡಬಹುದು. ನಿಗದಿತ ಫಾರ್ಮಗಳು ನಿರ್ದಿಷ್ಟ ಹಣಕಾಸು ಸಂಸ್ಥೆ ಅಥವ ಬ್ಯಾಂಕ್‌ಗಳಲ್ಲಿ ದೊರೆಯುತ್ತವೆ. ಅದನ್ನು ಭರ್ತಿ ಮಾಡಿ ಸಲ್ಲಿಸಿದರೆ, ಆದಾಯ ತೆರಿಗೆಗೆ ಪ್ಯಾನ್ ನಂಬರ್ ಇರುವಂತೆ ಇಲ್ಲಿ ಪಿಆರ್‌ಎಎನ್ ನಂಬರ್ ಅಂದರೆ ಪರ್ಮನೆಂಟ್ ರಿಟೈರ್‌ಮೆಂಟ್ ಅಕೌಂಟ್ ನಂಬರ್ ನೀಡಲಾಗುವುದು. ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಆದರೆ ವರ್ಷಕ್ಕೆ ಕನಿಷ್ಠ ರೂ. 6000 ಹೂಡಿಕೆ ಆಗಲೇಬೇಕು. ಪ್ರತಿ ಬಾರಿಯ ಹೂಡಿಕೆ ರೂ. 500 ಕ್ಕಿಂತ ಕಡಿಮೆ ಇರಕೂಡದು. ವರ್ಷದಲ್ಲಿ ಎಷ್ಟು ಸಲ ಬೇಕಾದರೂ ಹಣ ಕಟ್ಟಬಹುದು. ನಿಗದಿತ ಸಮಯದಲ್ಲಿ ಹಣ ಪಾವತಿ ಆಗದಿದ್ದರೆ 100 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. 

ಯೋಜನೆಯಲ್ಲಿ ಎರಡು ವಿಧಗಳಿವೆ. ಒಂದು, ಖಾತೆದಾರನಿಗೆ 58 ಅಥವ 60 ವರ್ಷ ತುಂಬಿದಾಗ ಪಿಂಚಣಿ ದೊರೆಯಲು ಆರಂಭವಾಗುತ್ತದೆ. ಇನ್ನೊಂದು ವಿಧದಲ್ಲಿ, ಖಾತೆದಾರನಿಗೆ ಅರುವತ್ತು ವರ್ಷ ತುಂಬಿದಾಗ ಖಾತೆಯಿಂದ ಹಣ ಹಿಂಪಡೆಯುವ ವಿಧಾನ. ಇದರಲ್ಲಿ ಒಟ್ಟೂ ಸಂಚಯಿತ ಮೊತ್ತದ ಶೇ.60ರಷ್ಟನ್ನು ಹಿಂಪಡೆಯಬಹುದು. ಶೇ.40ರಷ್ಟನ್ನು ಪಿಂಚಣಿ ಹೂಡಿಕೆಯಲ್ಲಿ ಮುಂದುವರಿಸಬೇಕಾಗುತ್ತದೆ.

ಸರಕಾರಿ ಹಣಕಾಸು ಯೋಜನೆಗಳಿಗೆ ಪ್ರಬಲ ಸ್ಪರ್ಧೆಯೊಡ್ಡುತ್ತಿರುವ ಖಾಸಗಿ ಕಂಪನಿಗಳ ಪಿಂಚಣಿ ಯೋಜನೆಗಳು ಹೆಚ್ಚು ಸ್ಪಷ್ಟ, ನಿಖರ. ದಶಕಗಳ ನಂತರದ ಹಣದುಬ್ಬರವನ್ನು ಅಂದಾಜಿಸಿ ಬೇಕಾಗುವ ಆದಾಯವನ್ನು ಲೆಕ್ಕ ಹಾಕುವಲ್ಲಿ ನಿಷ್ಣಾತವಾಗಿವೆ. ಉದಾಹರಣೆಗೆ ಈಗ ನಿಮ್ಮ ವಯಸ್ಸು 38 ವರ್ಷ. ನಿಮ್ಮ ತಿಂಗಳ ಅಂದಾಜು ವೆಚ್ಚ 9000 ರೂಪಾಯಿ. ಈಗಿನ 9000 ರೂಪಾಯಿ ಇನ್ನು ಇಪ್ಪತ್ತು ವರ್ಷಗಳ ನಂತರ, ಅಂದರೆ ನಿಮಗೆ 58 ವರ್ಷವಾದಾಗ ಹಣದುಬ್ಬರದ ನಿಗದಿತ ಪರಿಸ್ಥಿತಿಯಲ್ಲಿ ಎಷ್ಟಾಗಬಹುದೆಂದು ಲೆಕ್ಕ ಹಾಕಲಾಗುತ್ತದೆ. ಇಪ್ಪತ್ತು ವರ್ಷಗಳ ನಂತರ ನಿಮ್ಮ ಖರ್ಚು, ಈಗಿನ ರೀತಿಯಲ್ಲೇ ಮುಂದುವರಿದರೆ ರೂ. 16,000 ಮೀರಬಹುದು. ಈಗಿನಿಂದಲೇ ಪಿಂಚಣಿಗಾಗಿ ನಿಮ್ಮ ಹೂಡಿಕೆ ತಿಂಗಳಿಗೆ 12000 ರೂಪಾಯಿಗೂ ಅಧಿಕ ಇದ್ದಲ್ಲಿ, 20 ವರ್ಷಗಳ ನಂತರ ನೀವು ಕೊರತೆ ಇಲ್ಲದ ಜೀವನ ನಡೆಸಬಹುದು ಎಂಬುದು ಲೆಕ್ಕ. 

ಹೀಗೆ ವಿವಿಧ ಕಂಪನಿಗಳ ಲೆಕ್ಕ ವಿವಿಧ ರೀತಿಯಲ್ಲಿರುತ್ತದೆ. ಅಂತಿಮ ಗುರಿ ಒಂದೇ, ನಿವೃತ್ತಿಯ ವಯಸ್ಸಿನ ನಂತರವೂ ಕೆಲಸ ಮಾಡುತ್ತ ಬಸವಳಿಯುವ ಪ್ರಮೇಯ ಬರಬಾರದು. ಅಥವ ಮಕ್ಕಳ, ಸಂಬAಧಿಕರ ಮುಂದೆ ದುಡ್ಡಿಗಾಗಿ ಕೈಚಾಚುವ ಪ್ರಸಂಗ ಬರಬಾರದು. ಅಷ್ಟೇ ಅಲ್ಲ, ಮುಸ್ಸಂಜೆಯಲ್ಲೊAದು ಗೌರವಯುತ, ಆತ್ಮವಿಶ್ವಾಸ ತುಂಬಿದ, ಎಂದಿಗೂ ತಲೆಬಾಗದ ಜೀವನ ನನಸಾಗಬೇಕು.

ಹೀಗಾಗಿ, ಎಂದು ದುಡಿಮೆ ಆರಂಭವಾಗುವುದೋ ಅಂದೇ ವೃದ್ಧಾಪ್ಯಕ್ಕಾಗಿ ಸ್ವಲ್ಪ ಸ್ವಲ್ಪ ಉಳಿತಾಯ ಮಾಡುತ್ತ ಹೋದರೆ ಬಾಳ ಸಂಜೆಯಲ್ಲಿ ನೆಮ್ಮದಿಯ ಜೀವನ ಬಾಳಬಹುದು. ಇಲ್ಲವಾದರೆ, `ಆಡುತ್ತ ಆಡುತ್ತ ಆಯಸ್ಸು, ನೋಡುತ್ತ ನೋಡುತ್ತ ದಿನಮಾನ’ ಕಳೆದು ಹೋಗುತ್ತದೆ ಎಂಬ ಹಿರಿಯರ ಮಾತಿನಂತೆ ಕಾಲ ಸರಿದುಹೋಗಿದ್ದೇ ಗೊತ್ತಾಗುವುದಿಲ್ಲ. ಆಮೇಲೆ ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿರುವುದಿಲ್ಲ. 

 

Share6Tweet4SendShareShare
Next Post
ಭಾವಾನುಬಂಧ

ಭಾವಾನುಬಂಧ

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.