ಸೋಲು ಸೋಲು ಸಾಲು ಸಾಲು
ಮುಗಿಯದದರ ರಾಶಿ
ಕೊರಗಿ ಕೊರಗಿ ಕೂತರೆಂದು
ಸಿಗುವುದಿಲ್ಲ ಕಾಶಿ
ಏಳಬೇಕು ಪುಟಿದು-ಪುಟಿದು
ಎದೆಯ ತುಂಬ ಕನಸು
ಹಾರಿ-ಹಾರಿ ಜಿಗಿದು-ಜಿಗಿದು
ಸೋಲಬೇಕು ಸೋಲು
ಬೀಳು-ಏಳು, ಏಳು-ಬೀಳು
ಹಾವು ಏಣಿ ಸಾಲು ಸಾಲು
ಗೆಲುವಿಗೊಂದು ಸುಂಕವುಂಟು
ಕಟ್ಟಬೇಕು ನಾವು-ನೀವು
ಬಾರಿ ಬಾರಿ ಸೋತು ಸೋತು
ಬತ್ತಬಾರದು ಹುಮ್ಮಸ್ಸು
ಜಯ ವಿಜಯ ಗೆಲುವಿಗಾಗಿ
ಮುರಿಯಬಲ್ಲೆ ಶಿವಧನಸ್ಸು
ಹೊಸೆದು ಹೊಸೆದು ಹೊತ್ತಬೇಕು
ವಿಜಯವೆಂಬ ದೀಪ
ಮೊಗೆದು ಮೊಗೆದು ತುಂಬಬೇಕು
ನಮ್ಮ ಗೆಲುವ ಕಡಲ
-ಭಾವಶೂನ್ಯ
(ಗಣೇಶ್ ಗೋಪಿನಮರಿ)
Continue Reading









